Select Your Language

Notifications

webdunia
webdunia
webdunia
webdunia

ಕೇವಲ ಎರಡು ದಿನಕ್ಕೆ ರೂ.12 ಕೋಟಿ!

ಕೇವಲ ಎರಡು ದಿನಕ್ಕೆ ರೂ.12 ಕೋಟಿ!
Mumbai , ಭಾನುವಾರ, 12 ಫೆಬ್ರವರಿ 2017 (05:50 IST)
ಬೆಬೋ ಕರೀನಾ ಕಪೂರ್ ಗರ್ಭಿಣಿಯಾಗಿದ್ದಾಗ ಸಹ ಬಹಳಷ್ಟು ಜಾಹೀರಾತುಗಳಲ್ಲಿ, ರ‍್ಯಾಂಪ್ ವಾಕ್‌ಗಳಲ್ಲಿ ಸುದ್ದಿ ಮಾಡಿದ್ದರು. ತಾಯಿಯಾದ ಮೇಲೆ ಸಹ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಪಾಲ್ಗೊಂಡಿದ್ದರು. ಆದರೆ ಇತ್ತೀಚೆಗೆ ಸೋನಿ ಬಿಬಿಸಿ ಎರ್ಥ್ ರಾಯಭಾರಿಯಾಗಿ ಕರೀನಾ ಆಯ್ಕೆಯಾಗಿದ್ದಾರೆ.
 
ಇದಕ್ಕಾಗಿ ಕರೀನಾ ಕೇಳಿದ ಮೊತ್ತ ಎಷ್ಟು ಗೊತ್ತೆ? ಅಕ್ಷರಶಃ ರೂ.12 ಕೋಟಿ. ಅದೂ ಸಹ ಕೇವಲ ಎರಡು ದಿನಗಳ ಶೂಟಿಂಗಾಗಿ. ಕಿರುತೆರೆ ಮೇಲೆ ಕರೀನಾ ಬ್ರಾಂಡ್ ಅಸೋಸಿಯೇಷನ್ ಪ್ರಚಾರ ಮಾಡುತ್ತಿರುವುದು ಇದೇ ಮೊದಲ ಸಲ. 
 
ಆದರೂ ಕರೀನಾ ಕೇಳಿದ ಮೊತ್ತವನ್ನು ಕೊಡಲು ಸೋನಿ ಸಂಸ್ಥೆ ಹಿಂದೇಟು ಹಾಕಿಲ್ಲ. ಬಾಲಿವುಡ್ ಟಾಪ್ ನಟಿಮಣಿಯರಲ್ಲಿ ಕರೀನಾ ಸಹ ಒಬ್ಬರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಗೆಗಡಲಲ್ಲಿ ತೇಲಿಸಲು ’ಚಿಣಿಮಿಣಿ ಚಿಂತಾಮಣಿ’