Select Your Language

Notifications

webdunia
webdunia
webdunia
webdunia

ಕನ್ನಡಕ್ಕೆ ಬರುತ್ತಿದ್ದಾರೆ ರಸೆಲ್ ಪೂಕುಟ್ಟಿ

ಕನ್ನಡ ರಸೆಲ್
ಮುಂಬೈ , ಗುರುವಾರ, 19 ಮೇ 2016 (18:26 IST)
ಕನ್ನಡದ ನಟರು ಪರಭಾಷಾ ಸಿನಿಮಾಗಳಲ್ಲಿ ಅಭಿನಯಿಸೋದು ಹಾಗೇ ಪರಭಾಷೆಯ ಖ್ಯಾತ ತಾರೆಯರು ಕನ್ನಡ ಸಿನಿಮಾದಲ್ಲಿ ಅಭಿನಯಿಸೋದು, ಹಾಗೇ ಪರಭಾಷಾ ತಂತ್ರಜ್ಞರು ಕನ್ನಡ ಸಿನಿಮಾದಲ್ಲಿ ಕೆಲಸ ಮಾಡೋದು ಹೊಸ ವಿಚಾರವೇನಲ್ಲ.ಅದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣೆಗಳಿವೆ. ಇದೀಗ ದಕ್ಷಿಣ ಭಾರತದ ಖ್ಯಾತ ತಂತ್ರಜ್ಞರೊಬ್ಬರು ಕನ್ನಡಕ್ಕೆ ಬರೋದಕ್ಕೆ ರೆಡಿಯಾಗಿದ್ದಾರೆ.
ಪ್ರಶಸ್ತಿ ವಿಜೇತ ಧ್ವನಿ ಸಂಕಲನಕಾರ ಹಾಗೇ ಮಿಕ್ಸರ್ ಆಗಿರುವ ರಸೆಲ್ ಪೂಕುಟ್ಟಿ ಅವರನ್ನು ಕನ್ನಡ ಸಿನಿಮಾದಲ್ಲಿ ಕೆಲಸ ಮಾಡಿಸಬೇಕು ಅಂತಾ ಈಗಗಾಲೇ ಅನೇಕರು ಪ್ರಯತ್ನಿಸಿದ್ದರು.ಆದ್ರೆ ನಾನಾ ಕಾರಣಗಳಿಂದಾಗಿ ಅವರಿಗೆ ಕನ್ನಡ ಸಿನಿಮಾದಲ್ಲಿ ಕೆಲಸ ಮಾಡೋದಕ್ಕೆ ಸಾಧ್ಯವಾಗಿರಲಿಲ್ಲ. 
 
ಇದೀಗ ಗಿರೀಶ್ ಕಾಸರವಳ್ಳಿ ಅವರ ಪುತ್ರ ಅಪೂರ್ವ ಕಾಸರವಳ್ಳಿ ಅವರು ಪೂಕುಟ್ಟಿ ಅವರನ್ನು ಕನ್ನಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.ತಮ್ಮ ಮುಂದಿನ ಸಿನಿಮಾದಲ್ಲಿ ರಸೆಲ್ ಪೂಕುಟ್ಟಿ ಅವರ ಜೊತೆ ಕೆಲಸ ಮಾಡಲಿದ್ದಾರೆ ಅಪೂರ್ವ.
 
ಅಪೂರ್ವ ಅವರು ಇದೇ ಮೊದಲ ಬಾರಿಗೆ ನಿರುತ್ತರ ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ.ಸಿನಿಮಾದಲ್ಲಿ ರಾಹುಲ್ ಬೋಸ್ ಹಾಗೂ ಭಾವನಾ ಅವರು ಅಭಿನಯಿಸುತ್ತಿದ್ದಾರೆ.ಜೊತೆಗೆ ಐಂದ್ರಿತಾ ಹಾಗೂ ಕಿರಣ್ ಶ್ರೀನಿವಾಸ್ ಕೂಡ ಅಭಿನಯಿಸುತ್ತಿದ್ದಾರೆ. ಈ ಸಿನಮಾದಲ್ಲಿ ರಸೆಲ್ ಅವರು ಅಪೂರ್ವ ಕಾಸರವಳ್ಳಿ ಅವರ ಜೊತೆ ಕೆಲಸ ಮಾಡಲಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಬರ್ತಿದ್ದಾರೆ ಬ್ಯೂಟಿ ಕ್ವೀನ್ ರಮ್ಯಾ..