Select Your Language

Notifications

webdunia
webdunia
webdunia
webdunia

ಮದುವೆ ಬಗ್ಗೆ ಮೌನ ಮುರಿದ ಕಂಗನಾ ರನೌತ್

ಮದುವೆ ಬಗ್ಗೆ ಮೌನ ಮುರಿದ ಕಂಗನಾ ರನೌತ್
Mumbai , ಸೋಮವಾರ, 20 ಫೆಬ್ರವರಿ 2017 (21:01 IST)
ಮದುವೆ ಎಂಬುದು ಪ್ರತಿಯೊಬ್ಬರಿಗೂ ಅಗತ್ಯವೆಂದು ಬಾಲಿವುಡ್ ಬೆಡಗಿ ಕಂಗನಾ ರನೌತ್ ಹೇಳಿದ್ದಾರೆ. ಮನಸ್ಸಿಗೆ ಇಷ್ಟವಾಗುವವನು ಸಿಕ್ಕಿದರೆ ತಾನು ತಪ್ಪದೆ ಮದುವೆಯಾಗುತ್ತೇನೆ ಎನ್ನುತ್ತಿದ್ದಾರೆ. ಪ್ರೇಮವಿವಾಹ? ಅಥವಾ ಅರೇಂಜ್ಡ್ ಮ್ಯಾರೇಜ್ ಎಂಬುದು ಇನ್ನೂ ನಿರ್ಧರಿಸಿಲ್ಲ, ಅದಕ್ಕೆ ಇನ್ನೂ ಸಾಕಷ್ಟು ಸಮಯವಿದೆ ಎಂದಿದ್ದಾರೆ.
 
ಹೃತಿಕ್ ರೋಷನ್ ಜತೆಗಿನ ಪ್ರೇಮಾಯಣ ಮುರಿದುಬಿದ್ದ ಮೇಲೆ ಸದ್ಯಕ್ಕೆ ಕಂಗನಾ ರನೌತ್ ಕೆರಿಯರ್ ಮೇಲೆ ಸಂಪೂರ್ಣ ದೃಷ್ಟಿ ಹರಿಸಿದ್ದಾರೆ. ಈ ಸಂದರ್ಭದಲ್ಲಿ ಕಂಗನಾ ಮಾತನಾಡುತ್ತಾ, ನನ್ನ ಜೀವನವೊಂದು ತೆರೆದ ಪುಸ್ತಕವಿದ್ದಂತೆ. ಸಿನಿಮಾ, ವೈಯಕ್ತಿಕ ಜೀವನ, ಪ್ರೇಮಕ್ಕೆ ಸಂಬಂಧಿಸಿದಂತೆ ಯಾವುದನ್ನೂ ಮುಚ್ಚಿಡುವುದು ನನಗಿಷ್ಟವಿಲ್ಲ ಎಂದು ಹೇಳಿದ್ದಾರೆ.
 
ಒಂದು ವೇಳೆ ಬಚ್ಚಿಡಬೇಕು ಎಂದು ಬಯಸಿದರೂ ಅದು ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರತಿ ಭಾರಿ ನನ್ನ ಮನಸ್ಸಿನಲ್ಲಿರುವ ಮಾತನ್ನು ಯಾವುದೇ ಸಂಕೋಚವಿಲ್ಲದಂತೆ ಹೇಳುತ್ತೇನೆ. ಅದೇ ರೀತಿ ಮದುವೆ ಮಾಡಿಕೊಳ್ಳುವ ಸಮಯ ಬಂದರೆ ಎಲ್ಲರಿಗೂ ತಿಳಿಸಿಯೇ ಮದುವೆಯಾಗುತ್ತೇನೆ. ರಹಸ್ಯವಾಗಿ ಮದುವೆಯಾಗುವ ಅಗತ್ಯ ನನಗಿಲ್ಲ. ನನ್ನ ಮನಸ್ಸಿಗೆ ಇಷ್ಟವಾಗುವವನನ್ನು ದೊಡ್ಡವರನ್ನು ಒಪ್ಪಿಸಿ ಮದುವೆಯಾಗುತ್ತೇನೆ. ಅಷ್ಟೇ ಹೊರತು ಮದುವೆಗೆ ಭಯಬಿದ್ದು ಓಡಿಹೋಗುವುದಿಲ್ಲ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ಬಾಹುಬಲಿ 2’ರಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರ?