Select Your Language

Notifications

webdunia
webdunia
webdunia
webdunia

ನ್ಯಾಷನಲ್ ಅವಾರ್ಡ್ ಸ್ವೀಕರಿಸಿದ ಅಮಿತಾಬ್, ಕಂಗನಾ ರಣಾವತ್

ನ್ಯಾಷನಲ್ ಅವಾರ್ಡ್ ಸ್ವೀಕರಿಸಿದ ಅಮಿತಾಬ್, ಕಂಗನಾ ರಣಾವತ್
ಮುಂಬೈ , ಮಂಗಳವಾರ, 3 ಮೇ 2016 (17:45 IST)
ಅಮಿತಾಬ್ ಬಚ್ಚನ್ ಹಾಗೂ ನಟಿ ಕಂಗನಾ ರಣಾವತ್ ನ್ಯಾಷನಲ್ ಪ್ರಶಸ್ತಿ ಸ್ವೀಕರಿಸಿದ್ದಾರೆ.. ಅಮಿತಾಬ್ ಬಚ್ಚನ್ ಪಿಕೂ ಚಿತ್ರಕ್ಕಾಗಿ ಪ್ರಶಸ್ತಿ ಲಭಿಸಿದ್ರೆ, ಇನ್ನೂ ಕಂಗನಾಗೆ ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರಕ್ಕಾಗಿ ಪ್ರಶಸ್ತಿ ದೊರಕಿದೆ. 
ಮಾರ್ಚ್ 28ಕ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಇಂದು ನವದೆಹಲಿಯಲ್ಲಿ ಕಂಗನಾ ಪ್ರಶಸ್ತಿ ಸ್ವೀಕರಿಸಿದ್ರು.. ಕಂಗನಾ ರಣಾವತ್ ಅವರ ಕಾಮಿಡಿ ಡ್ರಾಮಾ ಆಧಾರಿತ ಚಿತ್ರ ತನು ವೆಡ್ಸ್ ಮನು ರಿಟರ್ನ್ ಚಿತ್ರಕ್ಕಾಗಿ ಕಂಗನಾಗೆ ಪ್ರಶಸ್ತಿ ಲಭಿಸಿದೆ.

ಈ ಪ್ರಶಸ್ತಿ ಕಂಗನಾಗೆ ಮೂರನೇ ಟ್ರೋಫಿ ಆಗಲಿದೆ.. ಈ ಚಿತ್ರದಲ್ಲಿ ಕಂಗಾನಾಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿರುವುದು ಹೆಮ್ಮೆಯ ಸಂಗತಿ.. ಮಾಧವನ್ ಜತೆಯಲ್ಲಿ ಕಾಣಿಸಿಕೊಂಡಿದ್ದ ಬ್ಯೂಟಿ ಕ್ವೀನ್.. 
 
ಇನ್ನೂ ಅಮಿತಾಬ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ದೊರೆಯುತ್ತಿರುವುದು ನಾಲ್ಕನೇ ಬಾರಿಗೆ.. 1990ರಲ್ಲಿ ಮೂಡಿ ಬಂದ ಅಗ್ನಿಪತ್ ಚಿತ್ರಕ್ಕಾಗಿ ಅಮಿತಾಬ್‌ಗೆ ಈ ಪ್ರಶಸ್ತಿ ದೊರಕಿತ್ತು.. ಅದಲ್ಲದೇ 2005 ಹಾಗೂ 2006ರಲ್ಲಿ ಬ್ಲ್ಯಾಕ್ ಮತ್ತು ಪಾ ಚಿತ್ರಕ್ಕಾಗಿ ಪ್ರಶಸ್ತಿ ಲಭಿಸಿದ್ದವು...

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

'ವಜಾ ತುಮ್ ಹೋ' ಚಿತ್ರದಲ್ಲಿ ಸನ್ಹಾ ಖಾನ್