Select Your Language

Notifications

webdunia
webdunia
webdunia
webdunia

ಕಬಾಲಿ ಚಿತ್ರದ ತಲೈವಾ ಹೊಸ ಪೋಸ್ಟರ್ ರಿಲೀಸ್

ಕಬಾಲಿ ಚಿತ್ರದ ತಲೈವಾ ಹೊಸ ಪೋಸ್ಟರ್ ರಿಲೀಸ್
ಮುಂಬೈ , ಶನಿವಾರ, 30 ಏಪ್ರಿಲ್ 2016 (17:20 IST)
ಸೂಪರ್ ಸ್ಚಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದಲ್ಲಿ ರಜನಿಕಾಂತ್ ಅವರ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್‌ನಲ್ಲಿ ತಲೈವಾ ರಜನಿಕಾಂತ್ ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 
ಚಿತ್ರದ ಹೊಸ ಪೋಸ್ಟರ್‌ನ್ನು ನಿರ್ಮಾಪಕ ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್ ನಲ್ಲಿ ರಜನಿ ಮುಖ ಲಕ್ಷಣಗಳನ್ನು ನೋಡಿದ್ರೆ ಅಚ್ಚರಿ ಮೂಡಿಸುತ್ತೆ. ಯಾಕಂದ್ರೆ ತಲೈವಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ, ಡಾನ್ ಆಗಿ ಕೈಯಲ್ಲಿ ರಿವಾಲ್ವರ್ ಹಿಡಿದು ನಿಂತಿರುವ ಪೋಸ್ಟರ್‌ ಬಿಡುಗಡೆಯಾಗಿದೆ. 
 
ಇದೀಗ ಚಿತ್ರದ ನ್ಯೂ ಪೋಸ್ಟರ್ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹಾಗೂ ಕೂತುಹಲ ಮೂಡಿಸಿದೆ. 

ಚಿತ್ರದ ಒಂದೊಂದು ಪೋಸ್ಟರ್ ಸಾಕಷ್ಟು ಕ್ರೇಜ್ ಮೂಡಿಸಿದೆ. ಪೋಸ್ಚರ್‌ನಲ್ಲಿ ರಜನಿಕಾಂತ್‌ರ ಎಲ್ಲಾ ಆ್ಯಕ್ಷನ್‌ಗಳು ನೋಡುಗರನ್ನು ಮೋಡಿ ಮಾಡುವಂತಿವೆ.
 
ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ  ಬಹಳಷ್ಟು ಸದ್ದು ಮಾಡಿದೆ. ಪಾ ರಂಜಿತ್ ನಿರ್ದೆಶನದ ರಜನಿಕಾಂತ್ ನಟಿಸಿರುವ ಕಬಾಲಿ ಚಿತ್ರದ ಶೂಟಿಂಗ್ ಮಲೇಷ್ಯಾದಲ್ಲಿ ನಡೆಸಲಾಗಿದೆ. ಇನ್ನೂ ಚಿತ್ರದಲ್ಲಿ ರಾಧಿಕಾ ಅಪ್ಟೆ, ಕಿಶೋರ್, ಕಲೈಯರಸನ್, ಧನಸಿಕಾ ಮತ್ತು ದಿನೇಶ್ ರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
 
ಕಬಾಲಿ ಚಿತ್ರ ಮೇ ತಿಂಗಳಲ್ಲಿ ತೆರೆಗೆ ಬರುವ ನಿರೀಕ್ಷೆಗಳಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟ ರಜನಿ ಅಭಿನಯದ ಚಿತ್ರ ವೀಕ್ಷಿಸಲು ಕಾತುರರಾಗಿದ್ದಾರೆ..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸದ ಬದ್ಧತೆ ಮುಂದೆ ಹಣ ಮುಖ್ಯವಲ್ಲ- ತಪಸ್ಯಾ ಪಾನು..