Select Your Language

Notifications

webdunia
webdunia
webdunia
webdunia

ಕಬಾಲಿ ಲೀಕ್: ಟಿಕೆಟ್‌ ಮಾರಾಟದ ಮೇಲೆ ಎಫೆಕ್ಟ್?

ಕಬಾಲಿ ಲೀಕ್
ಮುಂಬೈ , ಮಂಗಳವಾರ, 19 ಜುಲೈ 2016 (17:15 IST)
ಜುಲೈ 22ಕ್ಕೆ 'ಕಬಾಲಿ' ಚಿತ್ರ ರಿಲೀಸ್ ಆಗಲು ರೆಡಿಯಾಗಿದೆ. ಚಿತ್ರ ನೋಡಲು ರಜನಿ ಅಭಿಮಾನಿಗಳು ಟಿಕೆಟ್ ಗಾಗಿ ಅಡ್ವಾನ್ಸ್ ಬುಕಿಂಗ್ ಮಾಡುತ್ತಿದ್ದಾರೆ.. ಮೂಲಗಳ ಪ್ರಕಾರ ಕಬಾಲಿ ಚಿತ್ರ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಟಿಕೆಟ್ ಮೇಲೆ ಎಫೆಕ್ಟ್ ಆಗಲಿದೆ ಎನ್ನಲಾಗುತ್ತಿದೆ.

 
'ಕಬಾಲಿ' ಚಿತ್ರ ಡಾರ್ಕ್ ವೆಬ್‌ಲ್ಲಿ ಲೀಕ್ ಆಗಿದ್ದು, ಇಡೀ ಚಿತ್ರವನ್ನೇ ಜನರು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬದಂತೆ. ಆದ್ದರಿಂದ ಇದು ಚಿತ್ರ ತಂಡಕ್ಕೆ ಶಾಕ್ ಉಂಟುಮಾಡಿದೆ. ಈ ಬೆಳವಣಿಗೆಯಿಂದಾಗಿ ಬೆಂಗಳೂರಲ್ಲಿ ಟಿಕೆಟ್ ಮಾರಾಟದ ಮೇಲೆ ಎಫೆಕ್ಟ್ ಬೀರಲಿದೆ ಎನ್ನಲಾಗುತ್ತಿದೆ. 
 
ಚಿತ್ರದ ಫೀವರ್ ಎಲ್ಲೆಡೆ ಇರುವುದರಿಂದ ಚಿತ್ರದ ಟಿಕೆಟ್ ದರಕ್ಕೆ ಸಂಬಂಧಪಟ್ಟಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ.

ಟಿಕೆಟ್ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಎಂದು ಅರ್ಜಿದಾರರೊಬ್ಬರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ದರಕ್ಕೆ ಸಂಬಂಧಪಟ್ಟಂತೆ ಅರ್ಜಿಯನ್ನು ಮದ್ರಾಸ್ ಕೋರ್ಟ್ ಕೂಡ ತಿರಸ್ಕರಿಸಿದೆ. ಇದರಿಂದ ಸಿನಿಮಾ ಮಾಲೀಕರು ಖುಷಿಯಲ್ಲಿದ್ರೆ, ಅಭಿಮಾನಿಗಳಿಗೆ ಅಸಮಾಧಾನ ತಂದಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯರಾತ್ರಿ ಹೃತಿಕ್ ಮನೆಗೆ ಶಾರೂಖ್ ಹೋಗಿದ್ಯಾಕೆ?