Publish Date: Sat, 22 Oct 2016 (12:36 IST)
Updated Date: Sat, 22 Oct 2016 (12:43 IST)
ಮುಂಬೈ: ಜಾನ್ ಅಬ್ರಹಾಂ ತಮ್ಮ ಫೋರ್ಸ್-2 ಚಿತ್ರ ಮಾಡುವಾಗ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳುವಂತೆ ಸಹನಟಿ ಸೋನಾಕ್ಷಿ ಸಿನ್ಹಾಗೆ ಹೇಳಲು ಭಯಪಟ್ಟರಂತೆ.
ಶೂಟಿಂಗ್ ಪ್ರಾರಂಭವಾದ ಎರಡನೇ ದಿನಕ್ಕೇ ಜಂಪ್ ಮಾಡುವ ದೃಶ್ಯವಿತ್ತು. ಆದರೆ ಇದನ್ನು ಆಕೆಗೆ ಹೇಳಿದರೆ ಆಕೆ ಏನೆಂದುಕೊಳ್ಳುತ್ತಾರೋ. ಅಪ್ಪ ಶತ್ರುಘ್ನ ಸಿನ್ಹಾರಿಗೆ ಹೇಳಿದರೆ ಏನು ಮಾಡೋದು ಎಂದು ಭಯಪಟ್ಟರಂತೆ.
“ಹಿರೋಯಿನ್ ಗಳು ಸಾಹಸ ದೃಶ್ಯ ಮಾಡುವುದನ್ನು ನೋಡುವುದು ಕಡಿಮೆ. ಡ್ಯಾನ್ಸ್ ಮಾಡುವುದೇ ಹೆಚ್ಚು. ಆದರೆ ಸೊನಾಕ್ಷಿ ಚೆನ್ನಾಗಿ ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡರು” ಎಂದು ತಮ್ಮ ಸಹನಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ