Select Your Language

Notifications

webdunia
webdunia
webdunia
webdunia

ತ್ರಿವಳಿ ತಲಾಖ್ ನಿಲ್ಲಬೇಕು ಎಂದ ಚಿತ್ರ ಸಾಹಿತಿ ಜಾವೇದ್ ಅಖ್ತರ್

ತ್ರಿವಳಿ ತಲಾಖ್ ನಿಲ್ಲಬೇಕು ಎಂದ ಚಿತ್ರ ಸಾಹಿತಿ ಜಾವೇದ್ ಅಖ್ತರ್
Mumbai , ಶನಿವಾರ, 12 ನವೆಂಬರ್ 2016 (23:45 IST)
ಮುಂಬೈ: ದೇಶದಲ್ಲಿ ಮುಸ್ಲಿಂ ಸಂಪ್ರದಾಯದಂತೆ ತ್ರಿವಳಿ ತಲಾಖ್ ಪದ್ಧತಿ ನಿಲ್ಲಿಸುವ ಬಗ್ಗೆ ಚರ್ಚೆಗಳಾಗುತ್ತಿರಬೇಕಾದರೆ, ಬಾಲಿವುಡ್ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಇಂತಹ ಪದ್ಧತಿ ನಿರ್ನಾಮವಾಗಬೇಕು ಎಂದಿದ್ದಾರೆ.

ನರೇಂದ್ರ ಮೋದಿ ಸರ್ಕಾರ ತ್ರಿವಳಿ ತಲಾಖ್ ನಿಲ್ಲಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ನಾನು ಹಲವು ವರ್ಷಗಳಿಂದಲೂ ಇಂತಹದ್ದೊಂದು ಪದ್ಧತಿ ನಾಗರಿಕ ಸಮಾಜದಿಂದ ಕಿತ್ತೊಗೆಯಬೇಕು ಎಂದು ವಾದಿಸುತ್ತಿದ್ದೆ. ಆದರೆ ನಮ್ಮದು ಬೃಹತ್ ರಾಷ್ಟ್ರವಾದ್ದರಿಂದ ಏಕರೂಪ ನಾಗರಿಕ ಸಂಹಿತೆ ಎಷ್ಟರಮಟ್ಟಿಗೆ ಜಾರಿಯಾಗುತ್ತದೆ  ಎಂದು ಗೊತ್ತಿಲ್ಲ” ಎಂದಿದ್ದಾರೆ.

ಇಂತಹ ವಿಷಯಗಳನ್ನು ನಾಗರಿಕರ ಚರ್ಚೆಗೆ ಬಿಡಬೇಕೆಂದ ಅವರು ರಾಜಕೀಯ ನಾಯಕರ ದುರುದ್ದೇಶದಿಂದ ಕೂಡಿದ ಉತ್ತಮ ಯೋಜನೆಗಳೂ ಒಳ್ಳೆಯದಲ್ಲ ಎಂದರು. ಇಂದು ಇಸ್ಲಾಂ ಮತ್ತು ಹಿಂದೂ ಧರ್ಮಗಳು ಎರಡೂ ಅಪಾಯದಲ್ಲಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಸಿನಿಮಾ ಮುಂದಿನ ವರ್ಷ ಬಿಡುಗಡೆ