ಜವಾನ್ ಸಿನಿಮಾ ಸೆಪ್ಟೆಂಬರ್ 7ರಂದು ರಿಲೀಸ್ ಆಗಿ ಅಬ್ಬರದ ಗಳಿಕೆ ಮಾಡಿದೆ. ಹಲವು ಕಡೆಗಳಲ್ಲಿ ಈ ಚಿತ್ರ ಹೌಸ್ಫುಲ್ ಪ್ರದರ್ಶನ ಕಂಡಿದೆ. ವರದಿಗಳ ಪ್ರಕಾರ ಈ ಚಿತ್ರ ಭಾರತದಲ್ಲಿ ಮೊದಲ ದಿನ ಸುಮಾರು 75 ಕೋಟಿ ರೂಪಾಯಿ ಗಳಿಕೆ ಮಾಡಿದೆ! ಹಿಂದಿ ಭಾಷೆಯಲ್ಲೇ ಈ ಚಿತ್ರಕ್ಕೆ 65 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ತಮ್ಮದೇ ದಾಖಲೆಯನ್ನು ಶಾರುಖ್ ಖಾನ್ ಪುಡಿ ಮಾಡಿದ್ದಾರೆ.ಪಠಾಣ್ ಸಿನಿಮಾ ಮೊದಲ ದಿನ 57 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಯಶ್ ನಟನೆಯ ಕೆಜಿಎಫ್ 2 ಚಿತ್ರ 53 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಜವಾನ್ ಸಿನಿಮಾ ಈ ದಾಖಲೆಯನ್ನು ಪುಡಿ ಮಾಡಿದೆ. ಚಿತ್ರದ ಹಿಂದಿ ಅವತರಣಿಕೆಗೆ 65 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು, ಮೊದಲ ದಿನ ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದ್ದು ಇದೇ ಮೊದಲು. ಇನ್ನು, ತೆಲುಗು ಹಾಗೂ ತಮಿಳು ಭಾಷೆಯಿಂದ ಚಿತ್ರಕ್ಕೆ ತಲಾ 5 ಕೋಟಿ ರೂಪಾಯನ್ನ ಬಾಚಿಕೊಂಡಿದೆ.