Select Your Language

Notifications

webdunia
webdunia
webdunia
webdunia

10 ಲಕ್ಷಕ್ಕೆ ಮಾರಾಟವಾಯ್ತಾ 'ಜಾಗ್ವಾರ್' ಚಿತ್ರದ ಮೊದಲ ಟಿಕೆಟ್?

10 ಲಕ್ಷಕ್ಕೆ ಮಾರಾಟವಾಯ್ತಾ 'ಜಾಗ್ವಾರ್' ಚಿತ್ರದ ಮೊದಲ ಟಿಕೆಟ್?
ಬೆಂಗಳೂರು , ಗುರುವಾರ, 29 ಸೆಪ್ಟಂಬರ್ 2016 (18:24 IST)
ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಗೌಡ 'ಜಾಗ್ವಾರ್' ಚಿತ್ರದ ಮೊದಲ ಟಿಕೆಟ್ 10 ಲಕ್ಷಕ್ಕೆ ಸೇಲ್ ಆಗಿರುವುದರ ಬಗ್ಗೆ ಕೇಳಿ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಜಾಗ್ವಾರ್ ಬಹುನಿರೀಕ್ಷಿತ ಚಿತ್ರವಾಗಿರುವ ಜಾಗ್ವಾರ್ ಹವಾ ಎಲ್ಲೆಲ್ಲೂ ಜೋರಾಗಿ ಕೇಳಿ ಬರುತ್ತಿದೆ.

ಅಡ್ವಾನ್ಸ್ ಬುಕಿಂಗ್ ಅಕ್ಟೋಬರ್ 3ರಂದು ಶುರುವಾಗಲಿದೆ. ಚಿತ್ರಮಂದಿರಗಳಲ್ಲಿ ಅಕ್ಟೋಬರ್ 6ಕ್ಕೆ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗ್ವಾರ್  ಚಿತ್ರವನ್ನು ನೋಡಲು ತುದಿಗಾಲಲ್ಲಿ ನಿಂತಿರುವ ಅಭಿಮಾನಿಗಳು, ಪ್ರೇಕ್ಷಕರು ಈ ಮೊದಲೇ  ನೀವೂ ಟಿಕೆಟ್ ಬುಕ್ ಮಾಡಬಹುದು. 
 
ಅಕ್ಟೋಬರ್ 3ರಂದು ಆನ್‌ಲೈನ್ ಟಿಕೆಟ್ ಬುಕಿಂಗ್ ಶುರುವಾಗಲಿದೆ. ಸಂತೋಷ ಚಿತ್ರಮಂದಿರವಲ್ಲದೇ ಕರ್ನಾಟಕ ಎಲ್ಲಾ ಚಿತ್ರಮಂದಿರಗಳಲ್ಲೂ ಅಕ್ಟೋಬರ್ 6ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ.  

ಈ ಚಿತ್ರವನ್ನು ನಿಖಿಲ್ ಕುಮಾರ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಹಾಗೂ ತೆಲಗು ಭಾಷೆಗಳಲ್ಲಿ ಚಿತ್ರ ರಿಲೀಸ್ ಕಾಣಲಿದ್ದು, ಜಗಪತಿ ಬಾಬು, ಆದಿತ್ಯ ಮೆನನ್ ಮುಂತಾದ ಕಲಾವಿದರಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

Share this Story:

Follow Webdunia kannada

ಮುಂದಿನ ಸುದ್ದಿ

'4ಕೆ' ಚಿತ್ರ ನಿರ್ದೇಶನದತ್ತ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಹಂಸಲೇಖಾ