ಮಗನ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಜಗ್ಗೇಶ್ ಮನವಿ ಮಾಡಿದ್ಯಾಕೆ?

Webdunia
ಶುಕ್ರವಾರ, 20 ಜುಲೈ 2018 (07:06 IST)
ಬೆಂಗಳೂರು : ಕನ್ನಡದ ಚಿತ್ರರಂಗದ ಖ್ಯಾತ ನಟ ನವರಸನಾಯಕ ಜಗ್ಗೇಶ್ ಅವರು ತಮ್ಮ ಮಗನ  ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.


ಅವರು ಈ ರೀತಿ ಮನವಿ ಮಾಡಲು ಒಂದು ಕಾರಣವಿದೆ. ಅದೇನೆಂದರೆ ಕೆ.ಶಿವಕುಮಾರ್‌ ನಿರ್ಮಾಣದಲ್ಲಿ ಮೂಡಿಬರುತ್ತಿರುವ ರಾಜು ದೇವಸಂದ್ರ ನಿರ್ದೇಶನ ಮಾಡುತ್ತಿರುವ "ಗೋಸಿ ಗ್ಯಾಂಗ್‌” ಎಂಬ ಚಿತ್ರದಲ್ಲಿ ಜಗ್ಗೇಶ್ ಅವರ ಎರಡನೇ ಮಗ ಯತಿರಾಜ್ ಅವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಡ್ರಗ್ ಮಾಫಿಯಾದ ಪಾತ್ರ ನಿರ್ವಹಿಸುತ್ತಿದ್ದಾರೆ.


ಆದರೆ ಈ ಬಗ್ಗೆ ಸುದ್ದಿ ಪ್ರಕಟವಾಗುವಾಗ ಅದಕ್ಕೆ ನೀಡಿದ್ದ ಟೈಟಲ್ ಬಗ್ಗೆ ಬೇಸರಗೊಂಡ  ನಟ ಜಗ್ಗೇಶ್ ಅವರು ಈ ಬಗ್ಗೆ ಜನರಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ‘ಯತಿರಾಜ್ ನಟಿಸಿರುವುದು 'ಗೋಸಿ ಗ್ಯಾಂಗ್' ಚಿತ್ರದ ಕಥೆ. ಈ ಚಿತ್ರದ ಪ್ರಚಾರಕ್ಕೆ ಇಂಥ ಶೀರ್ಷಿಕೆ ಅಷ್ಟೆ. ಕೆಲವೊಮ್ಮೆ ಪ್ರಚಾರ ಅಪಪ್ರಚಾರಕ್ಕೆ ದಾರಿಯಾಗುತ್ತೆ. ಕೆಲವರಿಗೆ ಈ ರೀತಿಯ ವಿಷಯ ಅರಿವುದಕ್ಕೆ ಸ್ವಲ್ಪ ತಾಳ್ಮೆ ಕಮ್ಮಿ. ಪ್ರಚಾರ ಅಪಪ್ರಚಾರವಾಗೋದು ಬೇಡ’ವೆಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮದುವೆ ಬಳಿಕ ಮೊದಲ ಬಾರೀ ಒಟ್ಟಿಗೆ ಕಾಣಿಸಿಕೊಂಡ ಸಮಂತಾ- ರಾಜ್‌ ನಿಡಿಮೋರು

ಕೇರಳ ರಾಜ್ಯ ಪ್ರಶಸ್ತಿ ಪುರಸ್ಕೃತ ಮಲಯಾಳಂ ನಟ ಅಖಿಲ್ ವಿಶ್ವನಾಥ್ ಅನುಮಾನಾಸ್ಪದ ಸಾವು

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಮೊದಲ ದಿನವೇ 30 ಕೋಟಿ ಗಳಿಸಿದ್ದು ನಿಜಾನಾ

ಹೇಮಾ ಮಾಲಿನಿ ಚುನಾವಣೆಗೆ ನಿಂತಿದ್ದಾಗ ಧರ್ಮೇಂದ್ರರಿಂದ ಕರೆ ಬಂದಿತ್ತು: ಅಮಿತ್ ಶಾ ನೆನಪು

ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಹೋದರ ದಿನಕರ್‌

ಮುಂದಿನ ಸುದ್ದಿ
Show comments