ಹೌಸ್‌ಫುಲ್ 3 ಚಿತ್ರದ 'ಟಾಂಗ್ ಉಟಾಕೆ' ಹಾಡು ರಿಲೀಸ್ ಆಗಿದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್, ಅಭಿಷೇಕ ಬಚ್ಚನ್, ಹಾಗೂ ರಿತೇಶ್ ದೇಶಮುಥ್ ಲೀಸಾ ಹೆಡನ್, ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ಈ ಹಾಡಿನಲ್ಲಿ ಸಖತ್ ಆಗಿಯೇ ಸ್ಟೆಪ್ ಹಾಕಿದ್ದಾರೆ.
ಜಾಕ್ವೆಲಿನ್ ಫರ್ನಾಡಿಸ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ ಹೌಸ್‌ಫುಲ್ -3 ಚಿತ್ರದ ಟೇಲರ್ ಬಿಡುಗಡೆಯಾಗಿತ್ತು, ಬಹುನಿರೀಕ್ಷಿತ ಎಂದು ಹೇಳಲಾಗುತ್ತಿರುವ ಹೌಸ್ ಫುಲ್ ಚಿತ್ರವನ್ನ ಹೌಸ್ ಫುಲ್ ಆಗಿಯೇ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.
ಇನ್ನೂ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಡಿಸ್, ಅಕ್ಷಯ್ ಕುಮಾರ್ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ವಿಭಿನ್ನವಾಗಿ ಚಿತ್ರದ ಕಥೆ ಮೂಡಿ ಬಂದಿದೆ..