Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಈ ಗುಣ ಜಾಕ್ವೆಲಿನ್ ಫೆರ್ನಾಂಡೀಸ್ ಗೆ ತುಂಬಾ ಇಷ್ಟವಂತೆ

webdunia
ಶನಿವಾರ, 9 ಜೂನ್ 2018 (06:02 IST)
ಮುಂಬೈ : ರೇಸ್ 3 ಚಿತ್ರದ ಮೂಲಕ  ನಟ ಸಲ್ಮಾನ್ ಖಾನ್ ಅವರ ಜೊತೆಗೆ ಎರಡನೇ ಬಾರಿಗೆ ತೆರೆ ಹಂಚಿಕೊಂಡಿರುವ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡೀಸ್ ಅವರು ಇದೀಗ ತಮಗೆ ಸಲ್ಮಾನ್ ಖಾನ್ ಅವರ ಜೊತೆಗೆ ನಟಿಸಲು ತುಂಬಾ ಇಷ್ಟ ಎಂಬುದಾಗಿ ಹಾಗೂ ಇದಕ್ಕೆ ಕಾರಣವೆನೆಂಬುದನ್ನು ಕೂಡ  ಹೇಳಿಕೊಂಡಿದ್ದಾರೆ.


ಇತ್ತೀಚೆಗೆ ಮಾಧ್ಯಮದವರೊಂದಿಗೆ ರೇಸ್ 3 ಚಿತ್ರದ ಶೂಟಿಂಗ್ ನ ಅನುಭವವನ್ನು ಹಂಚಿಕೊಂಡ ನಟಿ ಜಾಕ್ವೆಲಿನ್ ಫೆರ್ನಾಂಡೀಸ್ ಅವರು ಆ ವೇಳೆ ಸಲ್ಮಾನ್ ಖಾನ್ ಅವರ ಬಗ್ಗೆ  ಮಾತನಾಡಿದ್ದಾರೆ. ‘ಮಾಮೂಲಾಗಿ ಶೂಟಿಂಗ್ ಮಾಡುವುದಕ್ಕೂ, ಸಲ್ಮಾನ್ ಖಾನ್ ಇರುವ ಸೆಟ್ ನಲ್ಲಿ ಶೂಟಿಂಗ್ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಾನು ಹಲವು ಚಿತ್ರಗಳಲ್ಲಿ ಮಾಡಿದ್ದೇನೆ. ಬೇರೆ ಚಿತ್ರದ ಶೂಟಿಂಗ್ ಸ್ಥಳ ಹಾಗೂ ಸಲ್ಮಾನ್ ಖಾನ್ ಇರುವ ಚಿತ್ರದ ಶೂಟಿಂಗ್ ಸೆಟ್ ಗಿರುವ ವ್ಯತ್ಯಾಸ ನನಗೆ ಅರಿವಾಗಿದೆ. ಇಡೀ ಟೀಂ ಅನ್ನು ಒಂದಾಗಿ ಕರೆದುಕೊಂಡು ಹೋಗುವ ಶಕ್ತಿ ಸಲ್ಮಾನ್ ಖಾನ್ ಗಿದೆ. ಅದು ನಿಜಕ್ಕೂ ಅಧ್ಬುತ. ನಾನು ಸಲ್ಮಾನ್ ಈ ಗುಣವನ್ನು ಬಹಳವಾಗಿ ಮೆಚ್ಚಿಕೊಳ್ಳುತ್ತೇನೆ’ ಎಂದು ಜಾಕ್ವೆಲಿನ್ ಅವರು ಸಲ್ಮಾನ್ ಖಾನ್ ಅವರ ಗುಣಗಾನ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಕಾಸ್ಟಿಂಗ್ ಕೌಚ್ ಬಗ್ಗೆ ನಿರಂಜನ್ ಹೇಳಿದ್ದೇನು? ಕೇಳಿದ್ರೆ ಶಾಕ್ ಆಗ್ತೀರಾ