Publish Date: Mon, 05 Mar 2018 (07:16 IST)
Updated Date: Mon, 05 Mar 2018 (07:21 IST)
ಮುಂಬೈ: ನಟಿ ಇಶಾ ಗುಪ್ತ ಈ ಬಾರಿ ಸಿರಿಯಾ ಬಿಕ್ಕಟ್ಟು ಕುರಿತು ಮಾಡಿದ ಟ್ವೀಟ್ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಇಶಾ ಗುಪ್ತ ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ, ನಾನು ಯಾವ ದೇಶದವಳು ಅಥವಾ ಧರ್ಮದವಳು ಅಥವಾ ಯಾವ ಸರ್ಕಾರದವಳು ಎಂಬುದನ್ನು ಕೇರ್ ಮಾಡುವುದಿಲ್ಲ. ಮಾನವೀಯತೆ ಸಾಯುತ್ತಿದೆ. ಮಕ್ಕಳು ಸಾಯುತ್ತಿದ್ದಾಳೆ, ಇದು ನಿಲ್ಲಬೇಕು, ಸಿರಿಯಾದಲ್ಲಿ ರಕ್ತಪಾತ ನಡೆಯುತ್ತಿದೆ ಎಂದು ಬರೆದುಕೊಂಡಿದ್ದರು. ಅದರ ಜೊತೆಗೆ ಪುಟ್ಟ ಮಗುವೊಂದರ ಚಿತ್ರವನ್ನೂ ಪೋಸ್ಟ್ ಮಾಡಿದ್ದರು.
ಇಶಾ ಗುಪ್ತ ಟ್ವೀಟ್ ಈಗ ಎಲ್ಲೆಡೆ ವೈರಲ್ ಆಗಿದೆ. ಕೆಲವರು ಆಕೆಯ ಕಾಳಜಿಯನ್ನು ಪ್ರಶಂಸಿಸಿದ್ದರೆ, ಇನ್ನು ಕೆಲವರು ಟೀಕಿಸಿದ್ದಾರೆ. ಭಾರತದಲ್ಲೂ ಇಂಥ ಸಂತ್ರಸ್ತ ಮಕ್ಕಳು ಸಾಕಷ್ಟಿದ್ದಾರೆ. ಅವರ ಬಗ್ಗೆ ನೀವು ಯಾಕೆ ಕಾಳಜಿ ತೋರುವುದಿಲ್ಲ ಎಂದು ಕೆಲವರು ಪ್ರಶ್ನಿಸಿದ್ದರೆ, ನಮ್ಮ ದೇಶದಲ್ಲೂ ಹಲವಾರು ಸಮಸ್ಯೆಗಳಿವೆ. ಅವುಗಳ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ