Select Your Language

Notifications

webdunia
webdunia
webdunia
webdunia

ಐಶ್ವರ್ಯಾ ರೈ ಬಗ್ಗೆ ಈ ಸುದ್ದಿ ನಿಜವಾ?

ಐಶ್ವರ್ಯಾ ರೈ ಬಗ್ಗೆ ಈ ಸುದ್ದಿ ನಿಜವಾ?
Mumbai , ಗುರುವಾರ, 1 ಡಿಸೆಂಬರ್ 2016 (12:39 IST)
ಮುಂಬೈ: ಬಾಲಿವುಡ್ ಬೆಡಗಿ ಬಚ್ಚನ್ ಮನೆ ಸೊಸೆ ಐಶ್ವರ್ಯಾ ರೈ ನಿಜವಾಗಲೂ ಟಿವಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಹೀಗೊಂದು ರೂಮರ್ ಹಬ್ಬಿದೆ.

ಬಾಲಿವುಡ್ ತಾರೆಯರು ಕಿರುತೆರೆಗೆ ನಿರೂಪಕರಾಗಿ ಬರುವುದು ಹೊಸದೇನಲ್ಲ. ಹೆಚ್ಚಿನ ತಾರೆಯರು ಕಿರುತೆರೆಯಲ್ಲಿ ಒಂದಲ್ಲೊಂದು ಶೋ ನಡೆಸಿಕೊಡುತ್ತಿದ್ದಾರೆ. ಕೆಲವು ಮೂಲಗಳ ಪ್ರಕಾರ ಐಶ್ವರ್ಯಾ ರೈ ಕೂಡಾ ರಿಯಾಲಿಟಿ ಶೋ ಒಂದರಲ್ಲಿ ಪಾಲ್ಗೊಳ್ಳುತ್ತಾರಂತೆ.

ಸ್ಟಾರ್ ಪ್ಲಸ್ ನಲ್ಲಿ ಮೂಡಿ ಬರಲಿರುವ ದಿಲ್ ಹೇ ಹಿಂದೂಸ್ತಾನಿ ರಿಯಾಲಿಟಿ ಶೋ ತೀರ್ಪುಗಾರರಾಗಲು ಒಪ್ಪಿಕೊಂಡಿದ್ದಾರೆ ಎನ್ನುತ್ತಿದೆ ಮೂಲಗಳು. ಈ ರಿಯಾಲಿಟಿ ಶೋನ ತೀರ್ಪುಗಾರರಾಗಿ ಈಗಾಗಲೇ ಕರಣ್ ಜೋಹರ್, ಶೇಖರ್ ರವಿಜಾನಿ,ಬಾದ್ ಶಹಾ ಮತ್ತು ಶಾಲ್ಮಲಿ ಖೊಲಗಡೆ ಆಯ್ಕೆಯಾಗಿದ್ದಾರೆ. ಇದೀಗ ಐದನೇ ತೀರ್ಪುಗಾರರಿಗಾಗಿ ಹುಡುಕಾಟ ನಡೆಸಲಾಗಿದ್ದು, ಮೂಲಗಳ ಪ್ರಕಾರ ಈ ಕುರ್ಚಿಗೆ ಐಶ್ವರ್ಯಾ ರನ್ನು ಕರೆ ತರಲಾಗುತ್ತದಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕುಮಾರ್ ರಾಷ್ಟ್ರೀಯ ಹಬ್ಬ ಬೆಂಗಳೂರಿನಲ್ಲಿ