ನಟ ಇರ್ಫಾನ್ ಖಾನ್ ಸಿಂಗರ್ ಆಗಲಿದ್ದಾರೆ.. ಅವರ ಮುಂಬರುವ ಚಿತ್ರ 'ಮಂದಾರಿ' ಚಿತ್ರದ ರಿಲೀಸ್ ಗಾಗಿ ಕಾಯುತ್ತಿರುವ ನಟ ಇರ್ಫಾನ್, ಟಿವಿ ಶೋ ಸರಿಗಮಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇರ್ಫಾನ್ ಎಲ್ಲಾ ಸ್ಪರ್ಧಿಗಳು ಗ್ರೇಟ್ ಸಿಂಗರ್ಸ್ ಎಂದು ಹೊಗಳಿದ್ದಾರೆ..
ಟಿವಿ ಶೋ ದಲ್ಲಿ ಭಾಗಿಯಾಗಿ ಎಲ್ಲಾ ಸ್ಪರ್ಧಿಗಳನ್ನು ನೋಡಿ ಪ್ರಭಾವಿತನಾಗಿದ್ದೇನೆ.ಎಲ್ಲರೂ ಸ್ಪರ್ಧಿಗಳು ಅದ್ಫುತವಾಗಿ ಹಾಡುತ್ತಾರೆ. ಆದ ಕಾರಣ ನಾನು ಕೂಡ ಹಾಡಲು ನಿರ್ಧರಿಸಿದ್ದೇನೆ.
ಮುಂಬರುವ ಚಿತ್ರದಲ್ಲಿ ಖಂಡಿತವಾಗಿಯೂ ಹಾಡಲಿದ್ದೇನೆ ಎಂದು ಇರ್ಫಾನ್ ತಿಳಿಸಿದ್ದಾರೆ. ಈದ್ ಸ್ಪೆಷಲ್ ಎಪಿಸೋಡ್‌ನಲ್ಲಿ ಇರ್ಫಾನ್ ಟಿವಿ ಶೋ ನಲ್ಲಿ ಭಾಗಿಯಾಗಿದ್ದರು.
ನಟ ಇರ್ಫಾನ್ ಖಾನ್ ಅಭಿನಯದ ಮಂದಾರಿ ಚಿತ್ರ ಜುಲೈ 22ಕ್ಕೆ ರಿಲೀಸ್ ಆಗಲಿದೆ. ಮಂದಾರಿ ಚಿತ್ರ 15ಕ್ಕೆ ರಿಲೀಸ್ ಆಗುತ್ತದೆ ಎಂದು ಹೇಳಲಾಗುತ್ತಿತ್ತು. ಎರಡು ಬಾರಿ ಚಿತ್ರವನ್ನು ಮುಂದೂಡಲಾಗಿತ್ತು. ಇರ್ಫಾನ್ ಖಾನ್ ತಮ್ಮ ಮುಂಬರುವ ಚಿತ್ರದ ಬಗ್ಗೆ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.. ವಿದ್ಯಾರ್ಥಿಗಳ ಜತೆ ಬೆರೆಯುವುದು ತಂಬಾ ಖುಷಿಯ ಸಂಗತಿ. ಅವರಲ್ಲಿರುವಂಥದ ಮುಗ್ಧತೆ ಹಾಗೂ ವಿಷಯದ ಬಗ್ಗೆ ತಿಳಿದುಕೊಳ್ಳುವ ಜ್ಞಾನ ಇಷ್ಟವಾಗುತ್ತದೆ ಎಂದು ಇರ್ಫಾನ್ ತಿಳಿಸಿದ್ದರು.