ನಟ ಇರ್ಫಾನ್ ಖಾನ್ ಅಭಿನಯದ ಮುಂಬರುವ ಚಿತ್ರ ಮಂದಾರಿಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅರವಿಂದ್ ಕೇಜ್ರಿವಾಲ್‌ರನ್ನು ನಟ ಇರ್ಫಾನ್ ಖಾನ್ ಸಂದರ್ಶನಕ್ಕಾಗಿ ಆಹ್ವಾನ ನೀಡಿದ್ದಾರೆ.
'ಮಂದಾರಿ' ಚಿತ್ರದ ಸಂಬಂಧ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್‌ರನ್ನು ಆಹ್ವಾನ ನೀಡಲಾಗಿದೆ ಎಂದು ನಟ ಇರ್ಫಾನ್ ಖಾನ್ ತಿಳಿಸಿದ್ದಾರೆ. ಮೊನ್ನೆ ನಟ ಇರ್ಫಾನ್ ಖಾನ್ ಚಿತ್ರದ ಪ್ರಚಾರಕ್ಕಾಗಿ ಬಿಹಾರ್‌ಗೆ ತೆರಳಿದ್ದರು.
ಅಲ್ಲಿ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದ್ದರು. ಈ ವೇಳೆ ಇರ್ಫಾನ್ ಖಾನ್ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿ ಆಗಿ ಸಂದರ್ಶನ ನಡೆಸಿದ್ದರು.
ನಾನು ಸಾಮಾನ್ಯ ಮನುಷ್ಯನಾಗಿ ಪ್ರಧಾನಿ ಬಗ್ಗೆ ಹಾಗೂ ದೆಹಲಿ ಸಿಎಂ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸಿದ್ದೇನೆ. ಜನರು ಪ್ರಧಾನಿಗೆ ಹಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತಾರೆ. ಅವರು ಯಾರನ್ನು ಕೇಳಬೇಕು. ಆದ್ದರಿಂದ ನಾನು ಜನರಿಗಾಗಿ ಹಾಗೂ ನನ್ನ ಮುಂಬರುವ ಚಿತ್ರಕ್ಕಾಗಿ ಸಂದರ್ಶನ ಮಾಡಲು ಬಯಸಿದ್ದು, ಚಿತ್ರಕ್ಕಾಗಿ ಪ್ರಧಾನಿ ಮೋದಿ ಜೀ. ಹಾಗೂ ಅರವಿಂದ್ ಕೇಜ್ರಿವಾಲ್ ಅವರನ್ನು ಸಂದರ್ಶನಕ್ಕೆ ಆಹ್ವಾನ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಅಲ್ಲದೇ ಬಾಬಾ ರಾಮದೇವ್‌ಗೂ ಸಹ ಆಹ್ವಾನ ಪತ್ರ ಕಳುಹಿಸಿದ್ದೇನೆ. ನಾನು ಸಾಮಾನ್ಯ ಮನುಷ್ಯನಾಗಿ ನಿಮಗೆ ಭೇಟಿ ಮಾಡುತ್ತೇನೆ ಎಂದು ಹೇಳಿದ್ದೇನೆ. ಮಂದಾರಿ ಚಿತ್ರದ ಪ್ರಚಾರಕ್ಕಾಗಿ ಚಿತ್ರದ ಕುರಿತು ಕೆಲ ಪ್ರಶ್ನೆಗಳನ್ನು ಕೇಳ ಬಯಸುವೆ ಎಂದು ಇರ್ಫಾನ್ ಖಾನ್ ಹೇಳಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ