ಒಂದು ಚಿತ್ರ ಬಾಕ್ಸ್ ಆಫೀಸ್‍ಗಾಗಿ ನಿರ್ಮಾಣವಾಗುವುದಿಲ್ಲ.. ಬಹಳಷ್ಟು ಸಲ ಸಣ್ಣ ಪಾತ್ರಗಳು ಮಾಡುವ ಸಂದರ್ಭ ಒದಗಿ ಬರುತ್ತದೆ. ಅಲ್ಲಿ ನಟನೆ ಮಾಡುವುದು ಮುಖ್ಯವಾಗುತ್ತದೆ ಎಂದು ನಟ ಇಮ್ರಾನ್ ಹಶ್ಮಿ ತಿಳಿಸಿದ್ದಾರೆ.
ನಿರೀಕ್ಷಿತ ಮಟ್ಟದಲ್ಲಿ ಅಜರ್ ಚಿತ್ರ ಯಶಸ್ಸು ಗಳಿಸಲು ಸಾಧ್ಯವಾಗುತ್ತಿಲ್ಲ.. ಇಮ್ರಾನ್ ಹಶ್ಮಿ ಹಾಗೂ ಪ್ರಾಂಚಿ ದೇಸಾಯಿ ಕಾಂಬಿನೇಷನ್‌ನಲ್ಲಿ ಬಂದಂತಹ ಚಿತ್ರ ಜನಮನ ಗೆಲ್ಲುವಲ್ಲಿ ವಿಫಲವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ನಟ ಇಮ್ರಾನ್ ಹಶ್ಮಿ ತಿಳಿಸಿದ್ದಾರೆ.
ಇದಿಷ್ಟೇ ಅಲ್ಲದೇ ಬಾಕ್ಸ್ ಆಫೀಸ್ ಗಳಿಕೆಯಲ್ಲು ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಮಾಡುತ್ತಿಲ್ಲ. ತೆರೆ ಕಂಡ ನಾಲ್ಚು ದಿನದಲ್ಲೇ ಅಜರ್ ಚಿತ್ರ 23 ಕೋಟಿ ಗಳಿಕೆ ಕಂಡಿದೆ.
'ಕಲಾವಿದ ಏನಾದರೂ ಹೊಸತನ್ನು ಮಾಡಲು ಇಚ್ಛಿಸುತ್ತಾನೆ.. ಕಲಾವಿದ ಯಾವುದೇ ಸಂದರ್ಭದಲ್ಲೂ ಹೊಸತನ್ನು ಮಾಡಲು ರೆಡಿ ಇರ್ತಾನೆ. ಆದ್ರೆ ಬಾಕ್ಸ್ ಆಫೀಸ್‌ಗಾಗಿ ಅಲ್ಲ, ಕೆಲವೊಂದು ಬಾರಿ ಸಣ್ಣ ಪಾತ್ರಗಳನ್ನು ಮಾಡಬೇಕಾಗುತ್ತದೆ. ಆ ವೇಳೆ ಅಭಿನಯ ಮುಖ್ಯವಾದದ್ದು' ಎಂದು ಇಮ್ರಾನ್ ಹಶ್ಮಿ ತಿಳಿಸಿದ್ದಾರೆ.