Select Your Language

Notifications

webdunia
webdunia
webdunia
webdunia

ಹೆಂಡ್ತಿಯಿಲ್ಲ ಮಕ್ಕಳಿಲ್ಲ ಅಂದ್ರೆ ಬೇಕಾದಷ್ಟು ಫ್ರೀ ಟೈಮ್ ಸಿಗುತ್ತದಂತೆ!

ಹೆಂಡ್ತಿಯಿಲ್ಲ ಮಕ್ಕಳಿಲ್ಲ ಅಂದ್ರೆ ಬೇಕಾದಷ್ಟು ಫ್ರೀ ಟೈಮ್ ಸಿಗುತ್ತದಂತೆ!
Mumbai , ಗುರುವಾರ, 8 ಡಿಸೆಂಬರ್ 2016 (09:25 IST)
ಮುಂಬೈ: ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಇನ್ನೂ ಮದುವೆಯಾಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಅವರು ಯಾಕೆ ಮದುವೆಯಾಗಿಲ್ಲ, ಮದುವೆಯಾಗಿಲ್ಲ ಎನ್ನುವುದಕ್ಕೆ ಬೇಸರವಾಗುತ್ತಾ ಎಂದು ಕೇಳಿದ್ದಕ್ಕೆ ಅವರು ಹೇಳಿದ ಉತ್ತರ ಕುತೂಹಲಕಾರಿಯಾಗಿತ್ತು.

ನಂಗೆ ಹೆಂಡ್ತಿಯಿಲ್ಲ, ಮಕ್ಕಳಿಲ್ಲ. ಹೀಗಾಗಿ ಬೇಕಾದಷ್ಟು ಫ್ರೀ ಟೈಂ ಸಿಗುತ್ತದೆ. ದಿನಕ್ಕೆ ಎಂಟು ಗಂಟೆ ನನಗೆ ಉಳಿತಾಯವಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ನಾನು ಏನಾದರೂ ಉಪಯುಕ್ತ ಕೆಲಸ ಮಾಡುತ್ತಿರುತ್ತೇನೆ. ಹಲವಾರು ಕೆಲಸ ಮಾಡುತ್ತಿರುತ್ತೇನೆ ಎಂದು ಕರಣ್ ಹೇಳಿಕೊಂಡಿದ್ದಾರೆ.

ಹಾಗಿದ್ದರೆ ಇದೇ ಕಾರಣಕ್ಕೆ ಕರಣ್ ಸಿಂಗಲ್ ಆಗಿ ಉಳಿದರಾ? ಅದಕ್ಕೆ ಅವರೇನೂ ಉತ್ತರಿಸಿಲ್ಲ.  ಆದರೆ ತಮ್ಮ ಜೀವನದಲ್ಲಿ ಸರಿಯಾದ ಸಂಗಾತಿಯನ್ನು ಹುಡುಕಲು ಹೊರಟು ಸೋತಿದ್ದೇನೆ ಎಂದು ಅವರು ಇತ್ತೀಚೆಗೆ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಡವಟ್ಟಾಯ್ತು ಕಿರಿಕ್ ಪಾರ್ಟಿ ಹಾಡು