Select Your Language

Notifications

webdunia
webdunia
webdunia
webdunia

ಲತಾ ಮಂಗೇಶ್ಕರ್ ಹುಟ್ಟುಹಬ್ಬಕ್ಕೆ ಶುಭಾಷಯ ತಿಳಿಸಿದ ಪ್ರಧಾನಿ ಮೋದಿ

ಲತಾ ಮಂಗೇಶ್ಕರ್ ಹುಟ್ಟುಹಬ್ಬಕ್ಕೆ ಶುಭಾಷಯ ತಿಳಿಸಿದ ಪ್ರಧಾನಿ ಮೋದಿ
ಮುಂಬೈ , ಬುಧವಾರ, 28 ಸೆಪ್ಟಂಬರ್ 2016 (12:17 IST)
ಬಾಲಿವುಡ್‌ನ ಖ್ಯಾತ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ 87ನೇಯ ಹುಟ್ಟುಹಬ್ಬದ ನಿಮಿತ್ಯ ಪ್ರಧಾನಿ ನರೇಂದ್ರ ಮೋದಿ ಶುಭಾಷಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ಲತಾ ಮಂಗೇಶ್ಕರ್' ಅವರಿಗೆ ದೇವರು ಆರೋಗ್ಯಕರ ಜೀವನ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ. 

 
ಈ ಮೂಲಕ ಬರ್ತಡೇ ಶುಭಾಷಯಗಳನ್ನು ಪ್ರಧಾನಿ ಮೋದಿ ಲತಾ ಮಂಗೇಶ್ಕರ್ ಅವರಿಗೆ ಸಲ್ಲಿಸಿದ್ದಾರೆ. ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಲತಾ ಮಂಗೇಶ್ಕರ್ ತಮ್ಮ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ. 

ಹಲವು ಬಾಲಿವುಡ್ ಚಿತ್ರಗಳಲ್ಲಿ ಲತಾ ಮಂಗೇಶ್ಕರ್ ತಮ್ಮ ಕಂಠ ನೀಡಿದ್ದಾರೆ. ಸುಮಧುರ ಕಂಠದಿಂದ ಭಾರತ ಅಲ್ಲದೇ ಹೊರ ದೇಶಗಳಲ್ಲಿಯೂ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಲತಾ ಮಂಗೇಶ್ಕರ್ ಅವರನ್ನು ಶ್ರೇಷ್ಠ ಗಾಯಕಿಯಾಗಿದ್ದು, ಬಂಗಾಳದ ಹಲವು ಚಿತ್ರಗಳಲ್ಲಿ ತಮ್ಮ ಸ್ವರಮಾಧುರ್ಯ ಹರಿಸಿರುವುದನ್ನು ಪರಿಗಣಿಸಿ ಅವರಿಗೆ ಬಂಗಾಬಿಭೂಷಣ್ ಪ್ರಶಸ್ತಿ ನೀಡಲಾಗಿತ್ತು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ಧರ್ಮಕ್ಕೆ ಸಮಂತಾ ಕನ್ವರ್ಟ್?