ಲುಧಿಯಾನ: ಮಹರ್ಷಿ ವಾಲ್ಮೀಕಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ರನ್ನು ಬಂಧಿಸಲಾಗಿದೆ ಎಂಬ ವರದಿಗಳನ್ನು ಪಂಜಾಬ್ ಪೊಲೀಸರು ನಿರಾಕರಿಸಿದ್ದಾರೆ.
ರಾಖಿ ವಕ್ತಾರರು ಆಕೆಯೇ ನ್ಯಾಯಾಲಯಕ್ಕೆ ಶರಣಾಗಿದ್ದಾರೆಂದು ಹೇಳಿದ್ದಾರೆ. ‘ರಾಖಿ ಪೊಲೀಸರ ಸುಪರ್ದಿಯಲ್ಲಿದ್ದಾರೆ. ಆಕೆ ಶರಣಾಗತಿಯಾಗಿದ್ದಾರೆ’ ಎಂದು ವಕ್ತಾರೆ ಪಾರುಲ್ ಚಾವ್ಲಾ ಹೇಳಿದ್ದಾರೆ.
ಇನ್ನೊಂದೆಡೆ ಆಕೆಯನ್ನು ಬಂಧಿಸಲು ವಾರಂಟ್ ಜತೆಗೆ ರಾಖಿ ನಿವಾಸಕ್ಕೆ ಹೋದಾಗ ಅಲ್ಲಿ ಆಕೆ ಇರಲಿಲ್ಲ ಎಂದು ಲುಧಿಯಾನಾ ಪೊಲೀಸರು ಹೇಳಿದ್ದಾರೆ. ಮುಂದೇನು ಮಾಡಬೇಕೆಂದು ನ್ಯಾಯಾಲಯದ ಸೂಚನೆಗಾಗಿ ಕಾಯುವುದಾಗಿ ಪೊಲೀಸರು ಹೇಳಿದ್ದಾರೆ. ಇದೇ ವೇಳೆ ಸುದ್ದಿಗಾರರಿಗೆ ಹೇಳಿಕೆ ಬಿಡುಗಡೆ ಮಾಡಿರುವ ರಾಖಿ ತಾನು ಸಲ್ಮಾನ್ ಖಾನ್ ರಂತೆ ನಿರಪರಾಧಿ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ