Select Your Language

Notifications

webdunia
webdunia
webdunia
webdunia

ಹೃತಿಕ್ ಜತೆ ದೀಪಿಕಾ ಮಾಡಲಿದ್ದಾರೆ ರೊಮ್ಯಾನ್ಸ್

ಹೃತಿಕ್ ಜತೆ ದೀಪಿಕಾ ಮಾಡಲಿದ್ದಾರೆ ರೊಮ್ಯಾನ್ಸ್
Mumbai , ಶನಿವಾರ, 24 ಡಿಸೆಂಬರ್ 2016 (12:30 IST)
ಅಭಿಮಾನಿಗಳಿಂದ ಬಾಲಿವುಡ್ ಗ್ರೀಕ್ ಗಾಡ್ ಎಂದು ಕರೆಸಿಕೊಂಡಿರುವ ಹೃತಿಕ್ ರೋಷನ್ ಹಾಗೂ ಚೆಂದುಳ್ಳಿ ಚೆಲುವೆ ದೀಪಿಕಾ ಪಡುಕೋಣೆ ಸಂಗಮದಲ್ಲಿ ಇದುವರೆಗೂ ಯಾವುದೇ ಚಿತ್ರ ಬಂದಿಲ್ಲ. ಕಹೋನಾ ಪ್ಯಾರ್ ಹೈ ಸಿನಿಮಾದ ಮೂಲಕ ಹದಿನಾರು ವರ್ಷಗಳ ಹಿಂದೆ ಹೃತಿಕ್ ಪರಿಚಯವಾದರು. 
 
ಇನ್ನು ಓಂ ಶಾಂತಿ ಓಂ ಚಿತ್ರದ ಮೂಲಕ 2007ರಲ್ಲಿ  ದೀಪಿಕಾ ಬಾಲಿವುಡ್‍ಗೆ ಅಡಿಯಿಟ್ಟರು. ಈ ಜೋಡಿಯೊಂದಿಗೆ ಸಾಜಿದ್ ನಡಿಯಾದ್ ವಾಲಾ ಒಂದು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. 
 
ಇದೀಗ ತಾಜಾ ಬೆಳವಣಿಗೆಯಲ್ಲಿ ಕರಣ್ ಜೋಹಾರ್ ನಿರ್ಮಿಸಲಿರುವ ಚಿತ್ರದಲ್ಲಿ ಇವರಿಬ್ಬರೂ ಜತೆಯಾಗಿ ಅಭಿನಯಿಸಲಿದ್ದಾರೆ. ಆ ಚಿತ್ರಕ್ಕೆ ಕರಣ್ ಮಲ್ಹೋತ್ರಾ ನಿರ್ದೇಶನ ಮಾಡಲಿದ್ದಾರಂತೆ. 2017ರ  ಮಾರ್ಚ್‍ನಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಗಳಿವೆಯಂತೆ. ಸದ್ಯಕ್ಕೆ ಪದ್ಮಾವತಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ ತೊಡಗಿಕೊಂಡಿದ್ದಾರೆ. ಅದಾದ ಕೂಡಲೆ ಕರಣ್ ಜೋಹರ್ ಸಿನಿಮಾ ಸೆಟ್ಟೇರಲಿದೆಯಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾಗರಹಾವು ಖ್ಯಾತಿ ಹಿರಿಯ ನಟ ಚೇತನ್ ರಾಮರಾವ್ ಇನ್ನಿಲ್ಲ