Publish Date: Thu, 25 Aug 2016 (10:25 IST)
Updated Date: Thu, 25 Aug 2016 (10:28 IST)
ಮೊಹೆಂಜಾದಾರೋ ಸಿನಿಮಾದ ಬಗ್ಗೆ ಹೃತಿಕ್ ರೋಷನ್ ಅವರಿಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಸಿನಿಮಾ ತನಗೊಂದು ಸ್ಪೆಷಲ್ ಇಮೇಜ್ ನ್ನು ತಂದುಕೊಂಡುತ್ತೆ ಅಂತಾ ಅವರು ಅಂದುಕೊಂಡಿದ್ದರು.ಆದ್ರೆ ಸಿನಿಮಾ ರಿಲೀಸ್ ಆದ ಮೇಲೆ ಆ ಎಲ್ಲಾ ನಿರೀಕ್ಷೆಗಳು ಹುಸಿಯಾದವು.
ಇದೇ ಬೇಸರದಲ್ಲಿ ಹೃತಿಕ್ ನಿರ್ದೇಶಕ ಅಶುತೋಷ್ ಅವರಿಗೆ ಹೃತಿಕ್ ಮೆಸೇಜ್ ಮಾಡಿದ್ದರಂತೆ.ಅಲ್ಲದೇ ಸಿನಿಮಾದ ಸೋಲಿಗೆ ನೀವೇ ಕಾರಣ ಅಂತಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಂತೆ. ಇದಕ್ಕೆ ಕೆರಳಿದ ಅಶುತೋಷ್ ತಾವು ಕೂಡ ಹಾಗೇ ತಿರುಗೇಟು ನೀಡಿದ್ದಾರೆ.ಇದೇ ಜಗಳ ಇಬ್ಬರ ನಡುವೆ ವೈಮನಸ್ಸಿಗೆ ಕಾರಣವಾಗಿದೆ.
ಮೊಹೆಂಜಾದರೋ ಕಾಲದ ಸ ಕಥಾ ಹಂದರವಿರುವ ಈ ಸಿನಿಮಾದಲ್ಲಿ ಹೃತಿಕ್ ತುಂಬಾನೇ ಚೆನ್ನಾಗಿ ಅಭಿನಯಿಸಿದ್ದಾರೆ. ಪೂಜಾ ಹೆಗ್ಡೆ ಮೊದಲ ಬಾರಿಗೆ ಈ ಸಿನಾಮದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಆದ್ರೆ ಸಿನಿಮಾ ರಿಲೀಸ್ ದಿನಾಂಕ ಬದಲಾಯಿಸದ್ದೇ ಸೋಲಿಗೆ ಕಾರಣ ಅಂತಿದ್ದಾರಂತೆ ಹೃತಿಕ್. ಅಕ್ಷಯ್ ಕುಮಾರ್ ಅಭಿನಯದ ರುಸ್ತುಮ್ ಸಿನಿಮಾ ಹಾಗೂ ಮೊಹೆಂಜದಾರೋ ಒಂದೇ ದಿನ ರಿಲೀಸ್ ಆಗಿದ್ದು ಸೋಲಿಗೆ ಕಾರಣ ಅಂತಾ ಹೃತಿಕ್ ಗರಂ ಆಗಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ