Select Your Language

Notifications

webdunia
webdunia
webdunia
webdunia

ಸನ್ನಿ ಲಿಯೋನ್‍ಗೆ ಐದು ನಿಮಿಷಕ್ಕೆ 4 ಕೋಟಿ ಆಫರ್!

ಸನ್ನಿ ಲಿಯೋನ್‍ಗೆ ಐದು ನಿಮಿಷಕ್ಕೆ 4 ಕೋಟಿ ಆಫರ್!
Mumbai , ಸೋಮವಾರ, 19 ಡಿಸೆಂಬರ್ 2016 (11:33 IST)
ಸನ್ನಿ ಲಿಯೋನ್‌ಗೆ ಇರೋಷ್ಟು ಕ್ರೇಜ್ ಬಾಲಿವುಡ್‌ನ ಬೇರಾವ ತಾರೆಗಳಿಗೂ ಇಲ್ಲ. ನೀಲಿ ಚಿತ್ರಗಳಿಂದ ಬೆಳ್ಳಿ ಚಿತ್ರಗಳಿಗೆ ಅಡಿಯಿಟ್ಟ ಈ ರೂಪಸಿ ಈಗ ಬಾಲಿವುಡ್‍ನ ಬಲು ಬೇಡಿಕೆಯ ತಾರೆ.  ಇಷ್ಟು ದಿನ ಪೋರ್ನ್ ಚಿತ್ರಗಳಲ್ಲಿ ಅಭಿನಯಿಸಿದ್ದ ಸನ್ನಿ ಈಗ ಒಮ್ಮೆಲೆ ಬಾಲಿವುಡ್ ಬಾದ್‌ಶಾ ಚಿತ್ರಗಳಲ್ಲಿ ಅಭಿನಯಿಸುವ ಮಟ್ಟಕ್ಕೆ ಬೆಳೆದಿದ್ದಾರೆ.
 
ಶಾರುಖ್ ಖಾನ್ ಮುಖ್ಯಭೂಮಿಕೆಯಲ್ಲಿರುವ ರಯೀಸ್ ಚಿತ್ರದಲ್ಲಿ ಲೈಲಾ ಓ ಲೈಲಾ ಅನ್ನುವ ಸೂಪರ್ ಹಿಟ್ ರಿಮಿಕ್ಸ್ ಹಾಡಿನಲ್ಲಿ ಸನ್ನಿ ಸೊಂಟ ಬಳುಕಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ರಯೀಸ್ ಟ್ರೇಲರ್‌ನಲ್ಲೂ ಸನ್ನಿ ’ಐಟಂ’ ನೋಡಬಹುದು. 
 
ಈ ಡ್ಯಾನ್ಸ್ ನೋಡಿದ ಮೇಲೆ ಸನ್ನಿ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ. ಹೊಸ ವರ್ಷಕ್ಕೆ ಸನ್ನಿಯನ್ನು ಕರೆತಂದು ಕುಣಿಸಲು ಅನೇಕ ಸ್ಟಾರ್ ಹೋಟೆಲ್‌ಗಳು ಪ್ರಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮುಂಬೈನ ಹೋಟೆಲೊಂದು ಸನ್ನಿಗೆ ಬಂಪರ್ ಆಫರ್ ನೀಡಿದೆ. 
 
ಐದು ನಿಮಿಷಗಳ ಕಾಲ ಸಾಗುವ ಲೈಲಾ ಓ ಲೈಲಾ ಹಾಡಿಗೆ ಡಿಸೆಂಬರ್ 31ರ ಮಧ್ಯ ರಾತ್ರಿ ಡಾನ್ಸ್ ಮಾಡಿದರೆ ರೂ. 4 ಕೋಟಿ ಕೊಡುತ್ತೀವಿ ಎಂದು ಆಫರ್ ಕೊಟ್ಟಿದೆ. ಐದೇ ನಿಮಿಷ ಕುಣಿದರೆ ಇಷ್ಟು ಮೊತ್ತ ಸಿಗುತ್ತಿದೆ. ಯಾರು ತಾನೆ ಬಿಡ್ತಾರೆ ಈ ತರದ ಆಫರ್. ಸನ್ನಿ ಇದೇ ತರದ ಇನ್ನಷ್ಟು ಡೀಲ್‌ಗಳನ್ನು ಕುದುರಿಸಿಕೊಂಡಿದ್ದಾರಂತೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲೇ ಹಸೆಮಣೆ ಏರಲಿರುವ ನಟಿ ಭಾವನಾ