Select Your Language

Notifications

webdunia
webdunia
webdunia
webdunia

ಹಾಲಿವುಡ್ ನಲ್ಲಿ ಸ್ಪೈಡರ್ ಮ್ಯಾನ್ ಸಿನಿಮಾ ಮಾಡಬೇಕು ಅಂತಿದ್ದಾರೆ ಟೈಗರ್ ಶ್ರಾಫ್

ಹಾಲಿವುಡ್ ನಲ್ಲಿ ಸ್ಪೈಡರ್ ಮ್ಯಾನ್ ಸಿನಿಮಾ ಮಾಡಬೇಕು ಅಂತಿದ್ದಾರೆ ಟೈಗರ್ ಶ್ರಾಫ್
ಮುಂಬೈ , ಶುಕ್ರವಾರ, 12 ಆಗಸ್ಟ್ 2016 (09:28 IST)
ಹಾಲಿವುಡ್ ನಲ್ಲಿ ಬಾಲಿವುಡ್ ಹುಡುಗಿಯರಾದ ಪ್ರಿಯಾಂಕ ಛೋಪ್ರಾ , ದೀಪಿಕಾ ಪಡುಕೋಣೆ ಹಾಗೇ ನರ್ಗೀಸ್ ಫಕ್ರಿ ಅವರು ತಮ್ಮದೇ ಆದ ಸ್ಥಾನ ಕಂಡುಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಇನ್ನೂ ಅನೇಕರು ಹಾಲಿವುಡ್ ನತ್ತ ಮುಖ ಮಾಡೋದಕ್ಕೆ ರೆಡಿಯಾಗಿದ್ದಾರೆ.

ಇಗಾಗಲೇ ದೀಪಿಕಾ ಹಾಗೇ ಪ್ರಿಯಾಂಕ ಛೋಪ್ರಾ ಅವರ ಹಾಲಿವುಡ್ ನಿರ್ದೇಶಕರ ಗಮನ ಸೆಳೆದಿದ್ದಾರೆ. ಹೀಗಿರುವಾಗಲೇ ಬಾಲಿವುಡ್ ನಟಿಯರಾದ ಅನುಷ್ಕಾ ಶರ್ಮಾ , ಸೋನಮ್ ಕಪೂರ್ ಅವರೆಲ್ಲಾ ನಾವು ಅವಕಾಶ ಸಿಕ್ರೆ ಹೋಗ್ತೀವಿ ಅಂತಿದ್ದಾರೆ.

ಆದ್ರೆ ಟೈಗರ್ ಶ್ರಾಫ್ ಮಾತ್ರ ಇವರೆಲ್ಲರಿಗಿಂತ ಕೊಂಚ ಮುಂದಿದ್ದಾರೆ. ನಾನು ಹಾಲಿವುಡ್ ನಲ್ಲಿ ಸ್ಪೈಡರ್ ಮ್ಯಾನ್ ಸಿನಿಮಾ ಮಾಡಬೇಕು ಅಂತಾ ಹೇಳಿಕೊಂಡಿದ್ದಾರೆ.ಆ ಮೂಲಕ ಹಾಲಿವುಡ್ ಗೆ ಹಾರುವ ತಮ್ಮ ಇಂಗಿತವನ್ನು ಹೊರ ಹಾಕಿದ್ದಾರೆ ಟೈಗರ್ ಶ್ರಾಫ್.

ಟೈಗರ್ ಶ್ರಾಫ್ ಅವರು ಚಿಕ್ಕ ಹುಡುಗನಾಗಿನಿಂದಲೇ ಅವರಿಗೆ ಅಭಿನಯದಲ್ಲಿ ವಿಶೇಷ ಒಲವಂತೆ. ಅದರಲ್ಲೂ ತಾನು ಸ್ಪೈಡರ್ ಮ್ಯಾನ್ ತರ ಆಕ್ಟ್ ಮಾಡಬೇಕು ಅಂತಾ ಅವರು ಬಹು ವರ್ಷಗಳಿಂದ ಕಾಯುತ್ತಲೇ ಬಂದಿದ್ದಾರಂತೆ. ಅಲ್ಲದೇ ಸ್ಪೈಡರ್ ಮ್ಯಾನ್ ಸೂಪರ್ ಹೀರೋ ಅಂತಾ ಟೈಗರ್ ಶ್ರಾಫ್ ಹೇಳಿದ್ದಾರೆ. ಇದೇ ಕಾರಣಕ್ಕೆ ನಾನು ಹಾಲಿವುಡ್ ನಲ್ಸಿ ಸ್ಪೈಡರ್ ಸಿನಿಮಾ ಮಾಡಬೇಕು ಅನ್ನೋ ಆಸೆ ಇಟ್ಟುಕೊಂಡಿದ್ದೇನೆ ಅಂತಾ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ನಟ ಯಶ್-ರಾಧಿಕಾ ಪಂಡಿತ್ ನಿಶ್ಚಿತಾರ್ಥ