Select Your Language

Notifications

webdunia
webdunia
webdunia
webdunia

ಗೋವಿಂದ್, ಶಿಲ್ಪಾ ಇನ್ ಟ್ರಬಲ್..!

ಗೋವಿಂದ್, ಶಿಲ್ಪಾ ಇನ್ ಟ್ರಬಲ್..!
ರಾಂಚಿ , ಮಂಗಳವಾರ, 18 ಅಕ್ಟೋಬರ್ 2016 (14:32 IST)
ಜಾರ್ಖಂಡ್: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ನಟ ಗೋವಿಂದ್ ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. 1996 ರಲ್ಲಿ ಈ ಜೋಡಿ ನಟಿಸಿದ ಚಿತ್ರದ ಹಾಡೊಂದು ಇದೀಗ ಇವರ ತಲೆ ನೋವಿಗೆ ಕಾರಣವಾಗಿದೆ.
 
ವಿಮಲ್ ಕುಮಾರ್ ನಿರ್ದೇಶಕನದ ಚೋಟಾ ಸರ್ಕಾರ್ ಚಿತ್ರದ ಹಾಡೇ ಇದೀಗ ಚಿತ್ರ ತಂಡವನ್ನು ಕೋರ್ಟ್ ಗೆ ಅಲೆದಾಡುವಂತೆ ಮಾಡಿದೆ. ಅಷ್ಟಕ್ಕೂ ಈ ಚಿತ್ರದಲ್ಲಿನ ಏಕ್ ಚುಮ್ಮಾ ಮುಜೇ ಉದರ್ ದೇ ದೇ, ಬದಲೇ ಮೈ ಯುಪಿ ಬಿಹಾರ್ ಲೇ ಲೇ.. ಅನ್ನೋ ಹಾಡು ಉತ್ತರ ಪ್ರದೇಶ ಹಾಗೂ ಬಿಹಾರ ಜನತೆಯನ್ನು ನಿಂದಿಸಿತ್ತು.
ಹೀಗಾಗಿ ಇದೇ ವಿಷ್ಯಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ನ ಸ್ಥಳೀಯ ನ್ಯಾಯವಾದಿವೊಬ್ರು 2000 ರಲ್ಲಿ ಕೋರ್ಟ್ ನಲ್ಲಿ ದಾವೆಹೂಡಿ ಚಿತ್ರತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದ್ರು. ಹಾಡಿನಲ್ಲಿ "ನನಗೊಂದು ಮುತ್ತು ಕೊಡು ನಾನು ಅದರ ಬದಲಿಗೆ ನಿನಗೆ ಉತ್ತರ ಪ್ರದೇಶ ಹಾಗೂ ಬಿಹಾರ ನೀಡುತ್ತೇನೆ' ಸಾಹಿತ್ಯವಿತ್ತು.
 
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ವಿವಾದ ಮುಂದೂಡತ್ತಲೇ ಬಂದಿತ್ತು. ಜೊತೆಗೆ ಚಿತ್ರದ ನಿರ್ದೇಶಕ ವಿಮಲ್ ಕುಮಾರ್, ಸಿಂಗರ್ಸ್ ಉದೀತ್ ನಾರಾಯಣ್, ಅಲ್ಕಾ ಯಗ್ನಿಕ್, ಮ್ಯೂಸಿಕ್ ಕಂಪೂಸರ್ ಆನಂದ್ ಮಿಲಿಂದ್, ನಟ ಗೋವಿಂದ್, ಶಿಲ್ಪಾ ಶೆಟ್ಟಿ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸಿತ್ತು.
 
ಇದೀಗ ಮತ್ತೆ ಇದೇ ಪ್ರಕರಣ ಚಾಲ್ತಿಯಲ್ಲಿದ್ದು, ಅಕ್ಟೋಬರ್ 18ರಂದು ಜಾರ್ಖಂಡ್ ನ ಪಾಕೂರ್ನಲ್ಲಿ ಮತ್ತೆ ವಿಚಾರಣೆ ಎದುರಿಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಗೆ ರೇಖಾ ಕ್ಯಾಪ್ಟನ್