Webdunia - Bharat's app for daily news and videos

Install App

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಬಗ್ಗೆ ಫುಲ್ ಎಕ್ಸೈಟ್ ಆಗಿದ್ದಾರಂತೆ ಅನಂತ್ ನಾಗ್

Webdunia
ಶುಕ್ರವಾರ, 3 ಜೂನ್ 2016 (10:17 IST)
ಪ್ರತಿಯೊಬ್ಬ ನಟ ನಟಿಗೂ ತಾನು ತನ್ನ ವೃತ್ತಿ ಬದುಕಿನಲ್ಲಿ ಇಂತಹದ್ದೊಂದು ಪಾತ್ರ ಮಾಡಬೇಕು ಅನ್ನೋ ಆಸೆ ಇರುತ್ತೆ. ಅಂತಹ ಪಾತ್ರ ಯಾವಾಗ ಸಿಗುತ್ತೆ ಅಂತಾ ಪ್ರತಿ ನಟ ನಟಿಯರು ಕಾಯುತ್ತಲೇ ಇರುತ್ತಾರೆ. ಅದಕ್ಕೆ ಹಿರಿಯ ನಟ ಅನಂತನಾಗ್ ಅವರು ಕೂಡ ಹೊರತಾಗಿಲ್ಲ. ಇದೀಗ ಅಂತಹ ಪಾತ್ರ ತನಗೆ ಸಿಕ್ಕಿರೋದಕ್ಕೆ ಖುಷಿಯಾಗಿದ್ದೇನೆ ಅಂತಿದ್ದಾರೆ ಅನಂತ್ ನಾಗ್.
ಅನಂತ್ ನಾಗ್ ಇದುವರೆಗೂ ಸುಮಾರು ಇನ್ನೂರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.ಆದ್ರೆ ಸದ್ಯ ಅವರು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದಲ್ಲಿ ಮಾಡುತ್ತಿರುವಂತಹ ಪಾತ್ರವನ್ನು ಎಂದೂ ಮಾಡಿಲ್ಲವಂತೆ. ಈ ಸಿನಿಮಾದಲ್ಲಿ ತನ್ನದು ಸಂಪೂರ್ಣವಾಗಿ ವಿಭಿನ್ನವಾದ ಪಾತ್ರ ಅಂತಾ ಅನಂತ್ ನಾಗ್ ಅವರು ಹೇಳಿದ್ದಾರೆ. 
 
ಸಿನಿಮಾದಲ್ಲಿ ನಾನು ತುಂಬಾನೇ ಛಾಲೆಂಜಿಂಗ್ ಆಗಿರುವಂತಹ ಪಾತ್ರವನ್ನು ಮಾಡಿದ್ದೇನೆ. ಇಂತಹದ್ದೊಂದು ಪಾತ್ರವನ್ನು ಮಾಡೋದಕ್ಕೆ ನಾನು ಕಾತುರದಿಂದ ಕಾಯುತ್ತಿದ್ದೆ ಅಂತಾ ಅವರು ಹೇಳಿದ್ದಾರೆ. ಹೆಂಡತಿಯನ್ನು ಕಳೆದುಕೊಂಡ ಪತಿಯಾಗಿ ಅನಂತ್ ನಾಗ್ ಅವರು ಈ ಸಿನಿಮಾದಲ್ಲಿ  ಕಾಣಿಸಿಕೊಂಡಿದ್ದಾರೆ.
 
ಅಂದ್ಹಾಗೆ ಹೆಸರೇ ಹೇಳುವಂತೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಕಳೆದು ಹೋದ ತಂದೆಯನ್ನು ಮಗನೊಬ್ಬ ಹುಡುಕುವ ಕಥಾಹಂದರವಿರುವ ಸಿನಿಮಾ. ಈ ಸಿನಿಮಾದಲ್ಲಿ ಅನಂತ್ ನಾಗ್ ಅವರ ಮಗನಾಗಿ ಉಳಿದವರು ಕಂಡಂತೆ ಸಿನಿಮಾ ಖ್ಯಾತಿಯ ರಕ್ಷಿತ್ ಶೆಟ್ಟಿ ಅವರು ಕಾಣಿಸಿಕೊಂಡಿದ್ದಾರೆ.

ಹೇಮಂತ್ ಈ ಸಿನಿಮಾವನ್ನು ನಿರ್ದೇಸನ ಮಾಡಿದ್ದಾರೆ. ಈ ಹಿಂದೆ ವಾಸ್ತುಪ್ರಕಾರ ಸಿನಿಮಾದಲ್ಲಿಯೂ ರಕ್ಷಿತ್  ಹಾಗೂ ಅನಂತ್ ನಾಗ್ ಅವರು ಜೊತೆಯಾಗಿ ಅಭಿನಯಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

ಮಡೆನೂರು ಮನುಗೆ ಶಿವಣ್ಣ ಗೇಟ್ ತೆರೆಯದೇ ಇದ್ದಿದ್ದು ನಿಜಾನಾ

ವೈಷ್ಣವಿ ಗೌಡ ಕತ್ತಲ್ಲಿ ತಾಳಿ ಇಲ್ಲ, ಆಷಾಢ ಮಾಸದಲ್ಲಿ ಹನಿಮೂನ್: ಏನಮ್ಮಾ ನಿನ್ ಅವಸ್ಥೆ

ಥಗ್ ಲೈಫ್‌ ಸಿನಿಮಾಗೆ ಸೋಲಿನ ನಡುವೆ ಕಮಲ್ ಹಾಸನ್ ಸಿನಿಮಾಗೆ ಬಿಗ್ ಶಾಕ್‌

ಮುಂದಿನ ಸುದ್ದಿ
Show comments