Webdunia - Bharat's app for daily news and videos

Install App

ಒಂದೇ ಹಾಡಿನಲ್ಲಿ ಅಭಿನಯಿಸಿದ ಏಳು ಗಾಯಕಿಯರು

Webdunia
ಶುಕ್ರವಾರ, 3 ಜೂನ್ 2016 (10:10 IST)
ಕನ್ನಡ  ಸಿನಿಮಾರಂಗದಲ್ಲಿ ಇದೀಗ ಹೊಸ ಹೊಸ ಪ್ರಯೋಗಗಳು ಆಗ್ತಾನೆ ಇವೆ. ಅದರಲ್ಲೂ ಹೊಸಬರ ಸಿನಿಮಾಗಳಲ್ಲಿ ಹೊಸ ಹೊಸ ಪ್ರಯೋಗಗಲು ಇದೀಗ ಮಾಮೂಲಾಗಿ ಬಿಟ್ಟಿದೆ. ಇದೀಗ ಅಂತಹದ್ದೇ ಹೊಸ ಪ್ರಯತ್ನವೊಂದಕ್ಕೆ ಸಾಕ್ಷಿಯಾಗಿದೆ ಕನ್ನಡದ ಮಕ್ಕಳ ಸಿನಿಮಾವೊಂದು. ಈ ಸಿನಿಮಾದ ಒಂದೇ ಹಾಡನ್ನು ಏಳು ಜನ ಗಾಯಕಿಯರು ಹಾಡಿದ್ದಾರೆ.
ಅಂದ್ಹಾಗೆ ಆ ಸಿನಿಮಾದ ಹೆಸರು ಫಲಿತಾಂಶ.ನಾವು ಇದುವೆರೆಗೂ ಒಂದೇ ಹಾಡನ್ನು ಅನೇಕ ಗಾಯಕಿಯರು ಹಾಡಿರೋದನ್ನು ನೋಡಿರುತ್ತೇವೆ. ಇಲ್ಲಾ ಒಂದು ಹಾಡಿನಲ್ಲಿ ಗಾಯಕ ಅಥವಾ ಗಾಯಕಿ ಅಭಿನಯಿಸಿರೋದನ್ನು ನೋಡಿರುತ್ತವೆ.
 
ಆದ್ರೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ತಯಾರಾಗುತ್ತಿರುವ ಫಲಿತಾಂಶ ಅನ್ನೋ ಸಿನಿಮಾದಲ್ಲಿ ಒಂದೇ ಹಾಡಿನಲ್ಲಿ ಕನ್ನಡ ಏಳು ಗಾಯಕಿಯರು ಅಭಿನಯಿಸಿದ್ದಾರೆ.ಬಿ.ಕೆ ಸುಮಿತ್ರ,ಮಾನಸ ಹೊಳ್ಳ,ಇಂದು ವಿಶ್ವನಾಥ್,ಪ್ರಾರ್ಥನಾ,ಸುರೇಖಾ, ಸಿತಾರ್ ಸುಬ್ರಮಣಿ, ರಮಾ ಅರವಿಂದ್ ಹೀಗೆ ಏಳು ಜನ ಗಾಯಕಿಯರು ಫಲಿತಾಂಶ ಸಿನಿಮಾದ ಒಂದೇ ಹಾಡಿನಲ್ಲಿ ಅಭಿನಯಿಸಿದ್ದಾರೆ.
 
 ಫಲಿತಾಂಶ ಸಿನಿಮಾ ಮಕ್ಕಲ ಕುರಿತಾದ ಸಿನಿಮಾ. ಈ ಸಿನಿಮಾ ಇಂದಿನ ಮಕ್ಕಳ ಪೋಷಕರಿಗೆ ಉತ್ತಮವಾದ ಸಂದೇಶಗಳನ್ನು ನೀಡುತ್ತಂತೆ. ಸಿನಿಮಾವನ್ನು  ಎಂ.ಆರ್ ಕಪಿಲ್ ಅನ್ನೋ ನವ ನಿರ್ದೇಶಕ ನಿರ್ದೇಶನ ಮಾಡುತ್ತಿದ್ದಾರೆ. ಇಂದಿನ ಪರೀಕ್ಷೆಗಳ ಫಲಿತಾಂಶಗಳು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅಂತಾ ಸಿನಿಮಾದಲ್ಲಿ ಹೇಳಲಾಗಿದೆಯಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

ಮಡೆನೂರು ಮನುಗೆ ಶಿವಣ್ಣ ಗೇಟ್ ತೆರೆಯದೇ ಇದ್ದಿದ್ದು ನಿಜಾನಾ

ಮುಂದಿನ ಸುದ್ದಿ
Show comments