Select Your Language

Notifications

webdunia
webdunia
webdunia
webdunia

ಭಟ್ರು ಮತ್ತು ಗಣೇಶ ಕಾಂಬಿನೇಷನ್‌ನಲ್ಲಿ ಸೆಟ್ಟೇರಲಿದೆ ಮೂರನೇ ಸಿನಿಮಾ

ಭಟ್ರು ಮತ್ತು ಗಣೇಶ ಕಾಂಬಿನೇಷನ್‌ನಲ್ಲಿ ಸೆಟ್ಟೇರಲಿದೆ ಮೂರನೇ ಸಿನಿಮಾ
ಬೆಂಗಳೂರು , ಬುಧವಾರ, 28 ಸೆಪ್ಟಂಬರ್ 2016 (10:31 IST)
ಸ್ಯಾಂಡಲ್‌ವುಡ್ ನಟ ಗಣೇಶ್ ಮುಂಗಾರು ಮಳೆ, ಗಾಳಿಪಟ ಆದ್ಮೇಲೆ ಇದೀಗ ಯೋಗರಾಜ್ ಭಟ್ ಜತೆಗೆ ಮೂರನೇ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಚರ್ಚೆಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.


ಗಣಿ ಹಾಗೂ ಭಟ್ರು ಕಾಂಬಿನೇಷನ್‌ನಲ್ಲಿ ಮೂರನೇ ಸಿನಿಮಾ ಇದಾಗಿದ್ದು, ಇನ್ನೂ ವಿಶೇಷವೆಂದ್ರೆ ಗಣಿ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್‌ನ ಈ ಚಿತ್ರದಲ್ಲಿ ನಾಲ್ವರು ನಾಯಕಿಯರ ಜತೆ ಗಣೇಶ್ ರೊಮ್ಯಾನ್ಸ್ ಮಾಡಲಿದ್ದಾರೆ. 
 
ಈಗಾಗ್ಲೇ ನಾಲ್ವರು ನಾಯಕಿಯರ ಆಯ್ಕೆ ಪ್ರಕ್ರಿಯೆ ನಡೆದಿದೆ. ಇನ್ನೂ ಯಾರು ಫೈನಲ್ ಆಗಿಲ್ಲ. ಹೊಸಬರಿಗೆ ಚಾನ್ಸ್ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಇನ್ನೂ ಯೋಗರಾಜ್ ಭಟ್ ನಿರ್ದೇಶನದ ದನ ಕಾಯೋನು ಚಿತ್ರ ರಿಲೀಸ್ ಆಗಬೇಕಿದೆ. ಯೋಗರಾಜ್ ಭಟ್ ಸದ್ಯ ಈ ಚಿತ್ರದಲ್ಲಿ ಬ್ಯೂಸಿ ಇದ್ದಾರೆ. ಅದು ಮುಗಿದ ಬಳಿಕ ಚಿತ್ರದ ಪ್ರೀ-ಪ್ರೊಡೆಕ್ಷನ್ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟರ್ ಆಗುತ್ತಿದ್ದಾರೆ ಸಲ್ಮಾನ್ ಖಾನ್