Select Your Language

Notifications

webdunia
webdunia
webdunia
webdunia

'ನಿನ್ನ ತೂಕ ಹೆಚ್ಚಿಸಿಕೊಳ್ಳಬೇಕು, ಲಿಪ್ಸ್ ಬದಲಾವಣೆ ಮಾಡಿಕೋ' ಎನ್ನಲಾಗಿದೆ: ರಿಚಾ ಚಡ್ಡಾ

Richa Chadha
ಮುಂಬೈ , ಶುಕ್ರವಾರ, 27 ಮೇ 2016 (19:47 IST)
ಬಾಲಿವುಡ್ ನಟಿ ರಿಚಾ ಚಡ್ಡಾ ಆ್ಯಕ್ಟಿಂಗ್ ಅಲ್ಲದೇ ತಮ್ಮ ಬಿಂದಾಸ್ ನಡಿಗೆಯಿಂದಲೇ ಹೆಸರುವಾಸಿಯಾಗಿದ್ದಾರೆ. ಸಂದರ್ಶನದಲ್ಲಿ ರಿಚಾ ಚಡ್ಡಾ ಈ ರೀತಿಯಾಗಿ ಹೇಳಿದ್ದಾಳೆ. ಬಾಲಿವುಡ್‌ಗೆ ಸಂಬಂಧಿಸಿದಂತೆ ಕೆಲ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.


ಮುಂಬೈ ಮೀರರ್‌ಗೆ ನೀಡಿದ ಸಂದರ್ಶನದಲ್ಲಿ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾಳೆ. ಬಾಲಿವುಡ್‌ನಲ್ಲಿ ಒಬ್ಬ ಮಹಿಳೆಯನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ.  ಮಹಿಳೆಯರು ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಹೊರಹಾಕಿದ್ದಾಳೆ.
 
ಬಾಲಿವುಡ್‌ನಲ್ಲಿ ಮಹಿಳೆಯು ಶಕ್ತಿಶಾಲಿ ಪಾತ್ರದ ಮೂಲಕ ಕಾಲಿಡುತ್ತಾಳೆ. ಅಲ್ಲಿ ತನ್ನ ನೆಲೆಯನ್ನು ಕಂಡುಕೊಳ್ಳಲು ಬಯಸುತ್ತಾಳೆ. ಆದ್ರೆ ಇಂಡಸ್ಟ್ರಿಯಲ್ಲಿ ಶಾರೀರಿಕವಾಗಿ ಬದಲಾವಣೆ ಆಗುವಂತೆ ಸೂಚಿಸಲಾಗುತ್ತದೆ ಎಂದು ಹೇಳಿದ್ದಾಳೆ. 
 
'ನನಗೆ ನಿನ್ನ ತೂಕವನ್ನು ಹೆಚ್ಚಿಸಿಕೋ, ನಿನ್ನ ಮೂಗನ್ನು ಚೆನ್ನಾಗಿ ಮಾಡಿಕೊಳ್ಳಬೇಕು.. ಅಲ್ಲದೇ ನಿನ್ನ ಸೊಂಟವನ್ನು ಕೂಡ ಬದಲಾವಣೆ ಆಗಬೇಕು' ಎಂದು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಬಾಲಿವುಡ್‌ನಲ್ಲಿ ಸ್ತನಗಳ ಬದಲಾವಣೆ ಮಾಡಿಕೊಳ್ಳುವಂತೆ  ಸೂಚಿಸಲಾಗುತ್ತದೆ . ಅಲ್ಲದೇ ಹಲವು ವಿಷಯಗಳ ಬಗ್ಗೆಯೂ ಹೇಳಲಾಗುತ್ತದೆ ಎಂದು ರಿಚಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ನಿವೆಂದು ನೋಡಿರದ ಹೊಸ ಅವತಾರ ನಟ ಶ್ರೀನಾಥ