ನಟಿ ಜೆನಿಲಿಯಾ ಅವರು ತಾಯ್ತನದ ಖುಷಿ ಅನುಭವಿಸುತ್ತಿದ್ದಾರೆ. ಹೀಗಿರುವಾಗಲೇ ಮೊನ್ನೆ ಪತಿ ರಿತೇಶ್ ದೇಶ್ ಮುಖ್ ಅವರು ನನಗೆ ಮರಾಠಿ ಸಿನಿಮಾದಲ್ಲಿ ಜೆನಿಲಿಯಾ ಅವರ ಜೊತೆ ಅಭಿನಯಿಸಬೇಕು ಅಂತಾ ಹೇಳೋ ಮೂಲಕ ಜೆನಿಲಿಯಾ ಅಭಿನಯಿಸೋಕೆ ರೆಡಿ ಅನ್ನೋ ಸೂಚನೆಯನ್ನು ನೀಡಿದ್ದರು. ಇದೀಗ ಜೆನಿಲಿಯಾ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಅಂತಾ ಹೇಳಲಾಗುತ್ತಿದೆ.
ಸಾಮಾನ್ಯವಾಗಿ ನಟಿಯರು ವಿವಾಹವಾದ ಮೇಲೆ ಮನೆ ಸಂಸಾರ ಮಕ್ಕಳು ಅಂತಾ ಬ್ಯುಸಿಯಾಗಿ ಬಿಡುತ್ತಾರೆ ಅನ್ನೋದು ಸಾಮಾನ್ಯ. ಮಾತು ಅದಕ್ಕೆ ಕೆಲವೇ ಕೆಲವೇ ನಟಿಯರು ಅಪವಾದವಾಗಿ ನಿಂತಿದ್ರೆ ಉಳಿದ ಹೆಚ್ಚಿನವರು ಸಿನಿಮಾರಂಗದಿಂದ ದೂರವಾಗಿ ಬಿಡುತ್ತಾರೆ. ನಟಿ ಜೆನಿಲಿಯಾ ವಿಚಾರದಲ್ಲಿ ಇದು ನಿಜ. ಮದುವೆಯಾದ ಬಳಿಕ ಮನೆ, ಸಂಸಾರ, ಮಕ್ಕಳು ಅಂತಾ ಜೆನಿಲಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಇದೀಗ ಎರಡು ಮಕ್ಕಳ ತಾಯಿಯಾದ ಬಳಿಕ ಜೆನಿಲಿಯಾ ಮತ್ತೆ ಅಭಿನಯಕ್ಕೆ ಬರುತ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ಅಂದ್ಹಾಗೆ ಅಭಿನಯ್ ಡಿಯೋ ಅವರ ಸಿನಿಮಾ ಫೋರ್ಸ್ -2 ನಲ್ಲಿ ಜೆನಿಲಿಯಾ ಅವರು ಅತಿಥಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.ಆದ್ರೆ ಅದು ತುಂಬಾ ಮಹತ್ವ ಹಾಗೂ ವಿಶೇಷವಾದ ಪಾತ್ರವಂತೆ. ಕೇವಲ ಎರಡು ದಿನದ ಶೂಟಿಂಗ್ ಇದ್ದು ಜೆನಿಲಿಯಾ ಪಾಲ್ಗೊಳ್ಳಲಿದ್ದಾರೆ ಅಂತಾ ಹೇಳಲಾಗುತ್ತಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.