ಗುರುನಂದನ್. ಕನ್ನಡ ಕಿರುತೆರೆಯ ಮೂಲಕ ಚಂದನವನಕ್ಕೆ ಕಾಲಿಟ್ಟ ಸುರ ಸುಂದರಾಂಗ. ಧಾರಾವಾಹಿಗಳಲ್ಲಿ ಅಭಿನಯಿಸ್ದರೂ ಗುರುನಂದನ್ ಅವರನ್ನು ಜನ ಗುರುತಿಸಿದ್ದು ಮಾತ್ರ ಫಸ್ಟ್ ರ್ಯಾಂಕ್ ರಾಜು ಸಿನಿಮಾದ ಮೂಲಕವೇ. ಮೊದಲ ಸಿನಿಮಾದಲ್ಲಿ ತನ್ನ ಪಾತ್ರದ ಮೂಲಕ ಅಭಿಮಾನಿಗಳನ್ನು ಮರಳು ಮಾಡಿದ ಗುರುನಂದನ್ ಇದೀಗ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಗುರುನಂದನ್ ಸಿನಿಮಾವೊಂದರಲ್ಲಿ ಅಭಿನಯಿಸುತ್ತಾರೆ ಅನ್ನೋ ಸುದ್ದಿ ಬಹುದಿನಗಳಿಂದ ಸ್ಯಾಂಡಲ್ ವುಡ್ ಅಂಗಳದಲ್ಲಿ ಕೇಳಿ ಬರುತ್ತಲೇ ಇತ್ತು.ಆದ್ರೆ ಯಾವ ಸಿನಿಮಾ ಅನ್ನೋದು ಮಾತ್ರ ಬಹಿರಂಗವಾಗಿರಲಿಲ್ಲ. ಸಿನಿಮಾಕ್ಕೆ ಹೆಸರು ಫಿಕ್ಸ್ ಆಗಿರಲಿಲ್ಲ.ಆದ್ರೆ ಇದೀಗ ಸಿನಿಮಾಕ್ಕೆ ಹೆಸರಿಡಲಾಗಿದೆ.
ಗುರುನಂದನ್ ಅಭಿನಯದ ಚಿತ್ರಕ್ಕೆ 'ರಾಜು ರಂಗಿತರಂಗ' ಎಂದು ಹೆಸರಿಡಲಾಗಿದೆ. ಜೊತೆಗೆ, 'ಫಸ್ಟ್ ರ್ಯಾಂ ಕೂ ಅಲ್ಲ, ಸೆಕೆಂಡ್ ರ್ಯಾಂ ಕೂ ಅಲ್ಲ..' ಎಂಬ ಟ್ಯಾಗ್ಲೈಗನ್ ಇದೆ.
ಇನ್ನು ರಂಗಿತರಂಗ ಸಿನಿಮಾಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲವಂತೆ. ಇದೊಂದು ಕಾಮಿಡಿ ಚಿತ್ರವಂತೆ. ರಾಜು ಎಂಬ ಹುಡುಗನ ಕಥೆಯಂತೆ. ಅದನ್ನೇ ವಿಭಿನ್ನ ಟೈಟಲ್ ಇಟ್ಟುಕೊಂಡು, ಚಿತ್ರತಂಡ ಕಥೆ ಹೇಳುವುದಕ್ಕೆ ಹೊರಟಿದೆ. 'ಫಸ್ಟ್ ರ್ಯಾಂಸಕ್ ರಾಜು ' ಚಿತ್ರದ ನಿರ್ದೇಶಕ ನರೇಶ್, ನಾಯಕ ಗುರುನಂದನ್ ಹಾಗೂ ತಾಂತ್ರಿಕ ವರ್ಗ ಈ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ