Webdunia - Bharat's app for daily news and videos

Install App

ಕಟ್ಟಪ್ಪನಿಗೆ ಫಿದಾ ಆದ ಆಸೀಸ್ ವೇಗಿ ಮಾಡಿದ್ದೇನು?

Webdunia
ಸೋಮವಾರ, 24 ಅಕ್ಟೋಬರ್ 2016 (09:40 IST)
ಬಾಹುಬಲಿ.. ಟಾಲಿವುಡ್‌ನಿಂದ ಹಾಲಿವುಡ್‌ವರೆಗೆ ಹುಬ್ಬೇರಿಸಿದ ಸಿನಿಮಾ. ಈ ಸಿನಿಮಾ ಮಾಡಿದ ಮೋಡಿಯೇ ಅಂತದ್ದು
ಮತ್ತೀಗ ಇದರ ಹವಾ ಕ್ರಿಕೆಟ್ ದುನಿಯಾದಲ್ಲೂ ಶುರುವಾಗಿದೆ.  ಆಸೀಸ್ ಕ್ರಿಕೆಟಿಗನೊಬ್ಬ ಈ ಚಿತ್ರವನ್ನು 10 ಬಾರಿ ನೋಡಿದ್ದಾನಂತೆ. ಚಿತ್ರದಲ್ಲಿನ ಸಾಹಸಮಯ ದೃಶ್ಯಗಳಿಗೆ ಮಾರು ಹೋಗಿರುವ ಆತನಿಗೆ ಸಂಪೂರ್ಣ ಸಿನಿಮಾದಲ್ಲಿ ತುಂಬಾ ಇಷ್ಟವಾದ ಪಾತ್ರ ಯಾವುದು? ಆ ಪಾತ್ರಕ್ಕೆ ಫಿದಾ ಆದ ಆತ ಮಾಡಿದ್ದೇನು ಗೊತ್ತಾ? ತಿಳಿಯಲು ಮುಂದೆ ಓದಿ.

ರಾಜಮೌಳಿ ನಿರ್ದೇಶಿಸಿದ ಅಪ್ರತಿಮ ಸಿನಿಮಾ ಬಾಹುಬಲಿಗೆ ಮರುಳಾಗಿರುವ ಆಸೀಸ್ ವೇಗಿ ಡಗ್ ಬೊಲಿಂಜರ್ ಚಿತ್ರವನ್ನು ಪದೇ ಪದೇ ನೋಡಿದ್ದಾರಂತೆ. ಈ ಸಿನಿಮಾ ಕಥೆಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ ಅವರು. ಅದರಲ್ಲೂ ಕಟ್ಟಪ್ಪನ ಪಾತ್ರ ಅವರಿಗೆ ಅದೆಷ್ಟು ಮೋಡಿ ಮಾಡಿದೆ ಎಂದರೆ ಅವರೀಗ ತಮ್ಮ ಗೆಟಪ್‌ನ್ನು ಕೂಡ ಕಟ್ಟಪನ ತರಹ ಬದಲಾಯಿಸಿಕೊಂಡಿದ್ದಾರೆ. ಆತನಂತೆ ಗಡ್ಡ ಬಿಟ್ಟು ಮಿಂಚುತ್ತಿದ್ದಾರೆ.  ಸಿನಿಮಾವನ್ನು ಕೊನೆಯವರೆಗೂ ನೋಡುವಂತೆ ಮಾಡುವವನೇ ಕಟ್ಟಪ್ಪ ಎಂದು ಅವರು ಗುಣಗಾನ ಮಾಡಿದ್ದಾರೆ.
 
ಅವರೆನ್ನುತ್ತಾರೆ: ಬಾಹುಬಲಿ ಸಿನಿಮಾದಲ್ಲಿ ನನಗೆ ಕಟ್ಟಪ್ಪನ ಪಾತ್ರ ತುಂಬಾ ಇಷ್ಟವಾಯಿತು. ಮೊದಲಿನಿಂದ ಕೊನೆಯವರೆಗೂ ಆತ ಸ್ವಾಮಿ ನಿಷ್ಠನಾಗಿರುತ್ತಾನೆ. ಆತನಂತೆ ನಾನು ಕೂಡ ಆಸೀಸ್ ತಂಡದ ನಿಷ್ಠಾವಂತ ಆಟಗಾರ ಆಟಗಾರ. ಪ್ರಾಮಾಣಿಕವಾಗಿ ದೇಶಕ್ಕಾಗಿ ಆಡುತ್ತೇನೆ. 
 
ಕಟ್ಟಪ್ಪನ ಪಾತ್ರ ಅವರಿಗೆ ಹುಚ್ಚು ಹಿಡಿಸಿರುವುದು ಸತ್ಯ. ಜತೆಗೆ ಅಂತಹ ಪ್ರಾಮಾಣಿಕ ಯೋಧ ಕೊನೆಗೆ ಬಾಹುಬಲಿಯನ್ನು ಕೊಂದಿದ್ದು ಏಕೆ ಎಂಬ ಪ್ರಶ್ನೆ ಸಿನಿಮಾ ನೋಡಿದ ಎಲ್ಲರಂತೆ ಅವರಿಗೂ ಕಾಡುತ್ತಿದೆ. ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಬಾಹುಬಲಿ - 2 ನೋಡುವುದಕ್ಕೆ ನಾನು ಕಾತರದಿಂದ ಕಾಯುತ್ತಿದ್ದೇನೆ ಎನ್ನುತ್ತಾರೆ ಬೊಲಿಂಜರ್ .

ಒಟ್ಟಿನಲ್ಲಿ ಬಾಹುಬಲಿ ಸಿನಿಮಾದ ಈ ಖ್ಯಾತಿ ಭಾರತೀಯ ಸಿನಿರಂಗದ ಯಶಸ್ಸಿಗೆ ಬಹುದೊಡ್ಡ ಉದಾಹರಣೆ. ಜತೆಗೆ ಕಟ್ಟಪ್ಪನ ಪಾತ್ರ ಪ್ರಾಮಾಣಿಕತೆ ಪಾಠ ಕಲಿಸಿರುವುದು ಒಂದು ಸಿನಿಮಾ ಪಾತ್ರ ಪ್ರೇಕ್ಷಕನ ಮೇಲೆ ಬೀರುವ ಪರಿಣಾಮಕ್ಕೆ ಸಾಕ್ಷಿ.
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments