Select Your Language

Notifications

webdunia
webdunia
webdunia
webdunia

ಅಮೇರಿಕಾದಲ್ಲೂ ರಿಲೀಸ್ ಆಗಲಿದೆ 'ದೊಡ್ಮನೆ ಹುಡುಗ 'ಸಿನಿಮಾ

ಅಮೇರಿಕಾದಲ್ಲೂ ರಿಲೀಸ್ ಆಗಲಿದೆ 'ದೊಡ್ಮನೆ ಹುಡುಗ 'ಸಿನಿಮಾ
ಬೆಂಗಳೂರು , ಗುರುವಾರ, 29 ಸೆಪ್ಟಂಬರ್ 2016 (17:29 IST)
ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡುಗ 'ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರ ಅಮೇರಿಕಾದಲ್ಲೂ ಬಿಡುಗಡೆಗೊಳ್ಳಲಿದೆ. ಅಮೇರಿಕಾದ ಮೂರು ಲೋಕೇಶನ್ ಗಳಲ್ಲಿ ಚಿತ್ರ ರಿಲೀಸ್ ಕಾಣಲಿದೆ. ಅಲ್ಲದೇ ಅರಿಜೋನ್,ಟೆಕ್ಸಾಸ್, ಓಹಿಯೋ,ಮಿಚಿಗನ್,ಫ್ಲೋರಿಡಾ,ವಾಷಿಂಗ್ಟನ್ ಮುಂತಾದ ಸ್ಧಳಗಳಲ್ಲಿ ಪ್ರದರ್ಶನಗೊಳ್ಳಲಿದೆ. 

 
ಅಲ್ಲದೇ ಚಿತ್ರ ಅಮೇರಿಕಾದ ಮೂರು ಸ್ಥಳಗಳು ಮಾತ್ರವಲ್ಲದೇ, ಓಹಿಯೋ, ಅರಿಜೋನ್,ಫ್ರೋರಿಡಾ, ಮಿಚಿಗನ್, ವಾಷಿಂಗ್ಟನ್ ಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ.

ಇನ್ನೂ ವಿಶೇಷವೆಂದರೆ ದೂನಿಯಾ ಸುರಿ ಚಿತ್ರದ ಬರಹಗಾರ ಹಾಗೂ ನಿರ್ದೇಶಕರಾಗಿದ್ದಾರೆ. ಗೋವಿಂದ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಪ್ರಮುಖವಾಗಿ ಅಂಬರೀಷ್, ಸುಮಲತಾ,ರವಿಶಂಕರ್,ಭಾರತಿ ವಿಷ್ಣುವರ್ಧನ ಮೊದಲಾದಲ ಕಲಾವಿದರು ಇರಲಿದ್ದಾರೆ. 

ಇನ್ನೂ ರಿಲೀಸ್‌ಗೂ ಮುನ್ನವೇ ನಟ ಅಂಬರೀಷ್ ಹಾಗೂ ಪುನೀತ್ ರಾಜಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಚಿತ್ರ ಗಳಿಕೆ ಕಂಡಿತ್ತು.  ಈಗಾಗ್ಲೇ ಸಿನಿಮಾ 14 ಕೋಟಿಗೆ ಸೇಲ್ ಆಗಿತ್ತು.ಮೊನ್ನೆ ಪವರ್ ಸ್ಟಾರ್ ಅಭಿನಯದ 'ದೊಡ್ಮನೆ ಹುಡುಗ' ಚಿತ್ರದ ಆಡಿಯೋ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಬಿಡುಗಡೆ ಮಾಡಲಾಗಿತ್ತು. ಕರ್ನಾಟಕ ರತ್ನ, ತ್ರಿವಿಧ ದಾಸೋಯಿ ಶ್ರೀ ಶಿವಕುಮಾರ್ ಸ್ವಾಮೀಜಿ ಸಮ್ಮುಖದಲ್ಲಿ ಆಡಿಯೋ ಬಿಡುಗಡೆಗೊಳಿಸಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಸೆಪ್ಟೆಂಬರ್ 30ಕ್ಕೆ 'ಜಾನ್ ಜಾನಿ ಜನಾರ್ಧನ' ಆಡಿಯೋ ಟೀಸರ್ ಬಿಡುಗಡೆ