ಶ್ರೀದೇವಿ ಸಾವಿನ ಹಿಂದೆ ಯಾರ ಕೈವಾಡವಿದೆ ಗೊತ್ತಾ?

Webdunia
ಬುಧವಾರ, 23 ಮೇ 2018 (06:19 IST)
ಮುಂಬೈ : ಫೆಬ್ರವರಿ 24 ರಂದು ದುಬೈ ನ ಹೋಟೆಲ್ ವೊಂದರಲ್ಲಿ ಬಾತ್ ಟಬ್ ನಲ್ಲಿ ಮುಳುಗಿ ಸಾವನಪ್ಪಿದ ಬಾಲಿವುಡ್ ನಟಿ ಶ್ರೀದೇವಿ ಅವರ  ಸಾವಿನ ಬಗ್ಗೆ ಇದೀಗ ಕೆಲವು ಅನುಮಾನಗಳು  ವ್ಯಕ್ತವಾಗುತ್ತಿದೆ.


ನಟಿ ಶ್ರೀದೇವಿ ಅವರದ್ದು ಸಹಜ ಸಾವಲ್ಲ ಅದು ಕೊಲೆ ಎಂಬ ಅನುಮಾನ ಹುಟ್ಟಿಕೊಂಡ ಹಿನ್ನಲೆಯಲ್ಲಿ ಬಾಲಿವುಡ್ ನಿರ್ಮಾಪಕರೊಬ್ಬರು ಶ್ರೀದೇವಿ ಸಾವಿನ ತನಿಖೆ ಕೋರಿ ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು ಕೂಡ ಏನು ಪ್ರಯೋಜನವಾಗಲಿಲ್ಲ. 


ಅನಂತರ ದೆಹಲಿಯ ನಿವೃತ್ತ ಸಹಾಯಕ ಪೊಲೀಸ್ ಕಮೀಷನರ್ ವೇದ್ ಭೂಷಣ್ ಎಂಬವರು, ಶ್ರೀದೇವಿಯದು ಆಕಸ್ಮಿಕ ಸಾವಲ್ಲ ಅದೊಂದು ಪೂರ್ವನಿಯೋಜಿತ ಕೊಲೆ. ತಾವು ಇದರ ತನಿಖೆಗಾಗಿ ದುಬೈಗೆ ತೆರಳಿದ್ದು, ಶ್ರೀದೇವಿ ತಂಗಿದ್ದ ಹೋಟೆಲ್ ರೂಂ ನ ಪಕ್ಕದ ರೂಂ ನಲ್ಲಿ ತಂಗಿ ಕೆಲವೊಂದು ಸಾಕ್ಷಾಧಾರಗಳನ್ನು ಪರಿಶೀಲಿಸಿದ್ದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಅವರು ಈ ಬಗ್ಗೆ ಸ್ಪೋಟಕ ಸುದ್ದಿಯೊಂದನ್ನು ಹೊರಹಾಕಿದ್ದಾರೆ. ಶ್ರೀದೇವಿ ಸಾವಿನ ಹಿಂದೆ ಕುಖ್ಯಾತ ಭೂಗತಪಾತಕಿ ದಾವೂದ್ ಇಬ್ರಾಹಿಂ ಕೈವಾಡವಿದೆ. ಅಲ್ಲದೇ, ಶ್ರೀದೇವಿ ಹೆಸರಿನಲ್ಲಿ 240 ಕೋಟಿ ರೂಪಾಯಿ ವಿಮೆ ಮಾಡಿಸಲಾಗಿತ್ತು. ಆಕೆಯ ಸಾವಿನ ಬಳಿಕವಷ್ಟೇ ಇದು ಸಂಬಂಧಿಸಿದವರಿಗೆ ದೊರಕುತ್ತಿತ್ತು. ದುಬೈ ಹೋಟೆಲ್ ನಲ್ಲಿ ನಡೆಸಿದ ತನಿಖೆ ವೇಳೆ ತಾವು ಕೆಲವೊಂದು ಸಾಕ್ಷಾಧಾರಗಳನ್ನು ಕಲೆಹಾಕಿದ್ದು, ಇದನ್ನು ನ್ಯಾಯಾಲಯದ ಮುಂದಿಡುವ ಮೂಲಕ ಶ್ರೀದೇವಿಯವರ ಸಾವಿನ ತನಿಖೆಗೆ ಆದೇಶಿಸುವಂತೆ ಮನವಿ ಮಾಡುವುದಾಗಿ ವೇದ್ ಭೂಷಣ್ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ: ದೈವ ಹೇಳಿದ್ದು ಏನು

ನಟ ಶಾರುಖ್‌ಖಾನ್ ಪುತ್ರನ ಇದೆಂಥಾ ದುರ್ವರ್ತನೆ, ವಿಡಿಯೋ ವೈರಲ್

ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಜತೆಗಿನ ವಿಶೇಷ ಕ್ಷಣದ ವಿಡಿಯೋ ಹಂಚಿಕೊಂಡ ಶೋಭಿತಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ಮುಂದಿನ ಸುದ್ದಿ
Show comments