ಅಮರ್ ಅಕ್ಬರ್ ಅಂತೋನಿ ಚಿತ್ರದಲ್ಲಿ ನಟಿಸಲು ಕಾಜಲ್ ಅಗರ್ ವಾಲ್ ಇಟ್ಟ ಬೇಡಿಕೆ ಏನು ಗೊತ್ತೇ?

Webdunia
ಶುಕ್ರವಾರ, 13 ಜುಲೈ 2018 (07:24 IST)
ಹೈದರಾಬಾದ್ : ತಮಿಳು, ತೆಲುಗಿನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ ಕಾಜಲ್ ಅಗರ್ ವಾಲ್ ಅವರು ಈಗ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಆದಕಾರಣ ಇವರಿಗೆ ಅಮರ್ ಅಕ್ಬರ್ ಅಂತೋನಿ ಸಿನಿಮಾದಲ್ಲಿ ನಟ ರವಿತೇಜಾ ಅವರ ಜೊತೆ ನಟಿಸುವ ಅವಕಾಶ ಹುಡುಕಿಕೊಂಡು ಬಂದರೂ ಕೂಡ ಆ ಅವಕಾಶವನ್ನು ಕಾಜಲ್ ಕಳೆದುಕೊಂಡಿದ್ದಾರೆ.


ಅದಕ್ಕೆ ಕಾರಣ ನಟಿ ಕಾಜಲ್ ಅಗರ್ ವಾಲ್ ಅವರು ನಿರ್ದೇಶಕರ ಮುಂದೆ ಇಟ್ಟ ಬೇಡಿಕೆಗಳು. ಹೌದು ಕಾಜಲ್ ಅವರು ಈ ಸಿನಿಮಾದಲ್ಲಿ ನಟಿಸಲು 7 ಡಿಜಿಟ್ ಸಂಭಾವನೆಗೆ ಬೇಡಿಕೆ ಇಟ್ಟಿದ್ದರು. ಇದು ನಾಯಕ ನಟನ ಸಂಭಾವನೆಗಿಂತಲೂ ಹೆಚ್ಚಾಗಿತ್ತು.
ಅಷ್ಟೇ ಅಲ್ಲದೇ 25 ದಿನಗಳ ಕಾಲ್ ಶೀಟ್ ಮಾತ್ರ ನಾನು ಕೊಡುವುದಾಗಿ ಅವರು ಹೇಳಿದ್ದರು. ತನ್ನ ವೈಯಕ್ತಿಕ ಕೇಶವಿನ್ಯಾಸಗಾರರು ಮತ್ತು ವಸ್ತ್ರವಿನ್ಯಾಸಕರಿಗೆ ನಿರ್ಮಾಪಕರೇ ಹಣ ಪಾವತಿಸಬೇಕು ಎಂದು ಬೇಡಿಕೆಗಳನ್ನು ಇಟ್ಟಿದ್ದು, ಇದನ್ನು ಕೇಳಿ ಕಂಗಾಲಾದ ನಿರ್ದೇಶಕರು ಕೊನೆಗೆ ಅವರನ್ನು ಚಿತ್ರದಿಂದ ಕೈ ಬಿಟ್ಟು ಬೇರೆ ನಟಿಗೆ ಆಫರ್ ಮಾಡಿದ್ದಾರಂತೆ. ಹೀಗಾಗಿ ರವಿತೇಜಾ ಜೊತೆಗೆ ಅಭಿನಯಿಸುವ ಅವಕಾಶವನ್ನು ಕಾಜಲ್ ಮಿಸ್ ಮಾಡಿಕೊಳ್ಳಬೇಕಾಯಿತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಮತ್ತೇ ದೊಡ್ಡ ಪರದೆ ಮೇಲೆ ಯಜಮಾನ

ಪವಿತ್ರಾ ಗೌಡಗೆ ಮಾಡಿದಂತೇ ಈ ಕಿರುತೆರೆ ನಟಿಗೂ ಮಾಡ್ತಿದ್ದ ಕಾಮುಕ: ಆದ್ರೆ ನಟಿ ಮಾಡಿದ್ದೇನು

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ಮುಂದಿನ ಸುದ್ದಿ
Show comments