Select Your Language

Notifications

webdunia
webdunia
webdunia
webdunia

ನಟಿ ದಿಶಾ ಪಟಾನಿಯನ್ನ ಇನ್ನಿಲ್ಲದಂತೆ ಕಾಡಿದ ಅಭಿಮಾನಿ

ನಟಿ ದಿಶಾ ಪಟಾನಿಯನ್ನ ಇನ್ನಿಲ್ಲದಂತೆ ಕಾಡಿದ ಅಭಿಮಾನಿ
mumbai , ಮಂಗಳವಾರ, 28 ಮಾರ್ಚ್ 2017 (11:57 IST)
ಬಾಲಿವುಡ್ ನಟಿ ದಿಶಾ ಪಟಾನಿ ತನ್ನ ಜೀವನದ ಅತ್ಯಂತ ಭಯಾನಕ ಸನ್ನಿವೇಶವನ್ನ ತೆರೆದಿಟ್ಟಿದ್ದಾರೆ. ಬ್ರಾಂಡ್ ಶೂಟಿಂಗ್ ಒಂದಕ್ಕೆ ದೆಹಲಿಗೆ ತೆರಳಿದ್ದ ಸಂದರ್ಭ ಹುಚ್ಚು ಅಭಿಮಾನಿಯೊಬ್ಬ ಹಿಂಬಾಲಿಸಿದ್ದನ್ನ ಪಟಾನಿ ಹೇಳಿಕೊಂಡಿದ್ದಾರೆ.
 

2 ದಿನ ದಿಶಾ ಪಟಾನಿ ಇದ್ದ ಹೋಟೆಲಿಗೆ ಹೋಗಿದ್ದ ಅಭಿಮಾನಿ, ದಿಶಾ ಭೇಟಿಗೆ ಪ್ರಯತ್ನ ನಡೆಸಿದ್ದಾನೆ.  ಅದು ಅಷ್ಟಕ್ಕೇ ನಿಂತಿಲ್ಲ. ಶೂಟಿಂಗ್ ಸೆಟ್, ಮಾಲ್, ಥಿಯೇಟರ್ ಎಲ್ಲೆಡೆ ಹಿಂಬಾಲಿಸಿದ್ದಾನೆ. ನಟಿಯ ಭೇಟಿಗೆ ಅವಕಾಶ ನೀಡಿಲಿಲ್ಲವೆಂದು ಹೋಟೆಲ್ ಸಿಬ್ಬಂದಿ ಜೊತೆಯೂ ಆ ವ್ಯಕ್ತಿ ಗಲಾಟೆ ಮಾಡಿಕೊಂಡಿದ್ದಾನೆ.

`ಆ ಪ್ರಹಸನದಿಂದ ನನಗೆ ಬಿಡುಗಡೆ ಸಿಕ್ಕಿದ್ದು, ನಾನೀಗ ನಿರಾಳವಾಗಿದ್ದೇನೆ. ನನ್ನ ಅಭಿಮಾನಿಗಳು ನನ್ನನ್ನ ಅತಿಯಾಗಿ ಇಷ್ಟಪಡುತ್ತಾರೆ. ಅದು ನನ್ನ ಅನುಭವಕ್ಕೆ ಬಂದಾಗಲೆಲ್ಲ ನಾನು ಶಾಕ್`ಗೆ ಒಳಗಾಗುತ್ತೇನೆ. ಅದೊಂದು ಅಹಿತಕರ ಅನುಭವ. ಎಂದಿದ್ದಾರೆ ದಿಶಾ.

ಆದರೆ, ಈ ಬಗ್ಗೆ ದಿಶಾ ಪೊಲೀಸ್ ಠಾಣೆಗೆ ದುರು ನೀಡಿಲ್ಲ. ಅದರ ಬದಲು ಬಾಡಿಗಾರ್ಡ್ ಒಬ್ಬರನ್ನ ನೇಮಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಬಿಂಗ್ ಚಿತ್ರಗಳ ಬಗ್ಗೆ ಶಿವರಾಜ್ ಕುಮಾರ್ ಹೊಸ ನಿಲುವು!