Publish Date: Thu, 19 Mar 2026 (12:12 IST)
Updated Date: Thu, 19 Mar 2026 (12:15 IST)
ಮುಂಬೈ: ರಣವೀರ್ ಸಿಂಗ್ ನಾಯಕನಾಗಿರುವ ಧುರಂಧರ್ 2 ಸಿನಿಮಾ ಇಂದು ಬಿಡುಗಡೆಯಾಗಿದ್ದು ಪ್ರಧಾನಿ ಮೋದಿ ರಿಯಲ್ ಆಗಿ ಕಾಣಿಸಿಕೊಂಡಿದ್ದರೆ ಭೂಗತ ದೊರೆ ದಾವೂದ್ ಇಬ್ರಾಹಿಂ ಪಾತ್ರವೂ ಸಿನಿಮಾದಲ್ಲಿದೆ.
3 ಗಂಟೆ 49 ಸಿನಿಮಾ ಅವಧಿಯ ಸುದೀರ್ಘ ಸಿನಿಮಾ ಧುರಂಧರ್ 2. ಧುರಂಧರ್ ಮೊದಲ ಭಾಗದಲ್ಲಿ ಹಮ್ಜಾ ಅಲಿ ಮಜಾರಿ, ರೆಹ್ಮಾನ್ ಡಕಾಯಿತ್ ನ ಹತ್ಯೆ ಮಾಡಿರುತ್ತಾನೆ. ಆ ಬಳಿಕ ನಡೆಯುವ ಸೇಡಿನ ಕತೆಯೇ ಧುರಂಧರ್ 2 ಸಿನಿಮಾ.
ಈ ಸಿನಿಮಾವೂ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಸಾಕಷ್ಟು ಸಾಹಸಮಯ ದೃಶ್ಯಗಳನ್ನು ಒಳಗೊಂಡಿದೆ. ವಿಶೇಷವೆಂದರೆ ಸಿನಿಮಾದಲ್ಲಿ ಪ್ರಧಾನಿ ಮೋದಿ ರಿಯಲ್ ಆಗಿ ಕಾಣಿಸಿಕೊಂಡಿದ್ದಾರೆ. ಅಂದರೆ ಅವರು ನೋಟ್ ಬ್ಯಾನ್ ಮಾಡಿದ ಬಗ್ಗೆ ಅಂದು ಸುದ್ದಿ ವಾಹಿನಿಗಳಲ್ಲಿ ಮಾಡಿದ್ದ ಘೋಷಣೆಯ ತುಣುಕನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಇನ್ನು, 1983 ರ ಮುಂಬೈ ಸರಣಿ ಸ್ಪೋಟದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪಾತ್ರವೂ ಸಿನಿಮಾದಲ್ಲಿ ಬರುತ್ತದೆ. ನಿರ್ದೇಶಕ ಆದಿತ್ಯ ಧಾರ್ ಸಿನಿಮಾವನ್ನು ಅದ್ಭುತವಾಗಿ ಪ್ರೇಕ್ಷಕರ ಮುಂದೆ ಕಟ್ಟಿಕೊಟ್ಟಿದ್ದಾರೆ. ಮೊದಲ ದಿನವೇ ಸಿನಿಮಾ ಬಗ್ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇಂದೇ 100 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಿದೆ.