ದೀಪಿಕಾ ಪಡುಕೋಣೆ ಅಭಿನಯದ ಹಾಲಿವುಡ್ ಸಿನಿಮಾ ’xXx : ದಿ ರಿಟರ್ನ್ ಆಫ್ ಕ್ಸೆಂಡರ್ ಕೇಜ್’ ಪ್ರೀಮಿಯರ್ ಮುಂಬೈನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಡಿಫರೆಂಟ್ ಸ್ಟೈಲ್ನಲ್ಲಿ ಬಂದ ದೀಪಿಕಾ ಎಲ್ಲರ ಗಮನಸೆಳೆದರು.
ಕಾರ್ಯಕ್ರಮಕ್ಕೆ ದೀಪಿಕಾ ಬಾಯ್ ಫ್ರೆಂಡ್ ರಣವೀರ್ ಕಪೂರ್ ಸೇರಿದಂತೆ ಶಾಹಿದ್ ಕಪೂರ್, ಕಲ್ಕಿ ಕೊಚಿನ್, ನೀಲ್ ನಿತಿನ್ ಮುಕೇಶ್, ಕೃತಿ ಸನೋನ್, ರಿಚಾ ಚಡ್ಡ ಮುಂತಾದ ಬಾಲಿವುಡ್ ತಾರೆಗಳ ಬಳಗವೇ ನೆರೆದಿತ್ತು. ಹಾಲಿವುಡ್ ಸ್ಟಾರ್ ವಿನ್ ಡೀಸೆಲ್, ಚಿತ್ರದ ನಿರ್ದೇಶಕ ಡಿಜೆ ಕರುಸೋರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ವಿನ್ ಡೀಸೆಲ್ ಜೊತೆ ದೀಪಿಕಾ ಲುಂಗಿ ಡಾನ್ಸ್ ಮಾಡಿದರು. ಇಬ್ಬರೂ ಕಪ್ಪು ಕನ್ನಡ ಹಾಕಿಕೊಂಡು ಕುಣಿದು ಕುಪ್ಪಳಿಸಿದರು. ಎಲ್ಲೇ ಹೋದರೂ ದೀಪಿಕಾ ಎದೆಸೀಳು ಪ್ರದರ್ಶನ ಮಾತ್ರ ನಿಂತಿಲ್ಲ. ಇಲ್ಲೂ ಅಷ್ಟೇ ಪಡ್ಡೆಗಳಿಗೆ ನಿದ್ದೆ ಇಲ್ಲದಂತೆ ಮಾಡಿದ್ದಾರೆ. ಫೋಟೋ ನೋಡಿ ಗೊತ್ತಾಗುತ್ತದೆ ಅವರ ಅವತಾರ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.