Select Your Language

Notifications

webdunia
webdunia
webdunia
webdunia

’ಪದ್ಮಾವತಿ’ ಗೂಮರ್ ಡ್ಯಾನ್ಸ್‌ ಪ್ರಮುಖ ಆಕರ್ಷಣೆ

’ಪದ್ಮಾವತಿ’ ಗೂಮರ್ ಡ್ಯಾನ್ಸ್‌ ಪ್ರಮುಖ ಆಕರ್ಷಣೆ
Mumbai , ಗುರುವಾರ, 8 ಡಿಸೆಂಬರ್ 2016 (10:19 IST)
ಬಾಜಿರಾವ್ ಮಸ್ತಾನಿ’ ಚಿತ್ರದ ಮೂಲಕ ಮತ್ತೊಂದು ಹಿಟ್ ಚಿತ್ರ ತನ್ನ ಖಾತೆಗೆ ಸೇರಿಸಿಕೊಂಡ ದೀಪಿಕಾ ಪಡುಕೋಣೆ ಇದೀಗ ಇನ್ನೊಂದು ದಾಖಲೆಗೆ ಸಿದ್ಧವಾಗುತ್ತಿದ್ದಾರೆ. ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ’ಪದ್ಮಾವತಿ’ ಚಿತ್ರದಲ್ಲಿ ಅವರು ಬಣ್ಣಹಚ್ಚಿರುವುದು ಗೊತ್ತೇ ಇದೆ. 
 
ಈ ಚಿತ್ರದ ಹೈಲೈಟ್‍ಗಳಲ್ಲಿ ಗೂಮರ್ ಡ್ಯಾನ್ಸ್ ಪ್ರಮುಖವಾಗಿ ನಿಲ್ಲಲಿದೆ. ಮೊದಲೇ ಹಾಟ್ ಬಾಂಬ್ ದೀಪಿಕಾ. ಇನ್ನು ಸೊಂಟ ಬಳುಕಿಸುವುದರಲ್ಲಿ ಎತ್ತಿದ ಕೈ. ಗೂಮರ್ ಡ್ಯಾನ್ಸ್ ಅಂದ್ರೆ ಕೇಳಬೇಕೆ. ರಾಜಸ್ತಾನಿ ಶೈಲಿಯ ನೃತ್ಯದಲ್ಲಿ ಅವರು ಮಿಂಚಲಿರುವುದು ಚಿತ್ರವನ್ನು ನಿರೀಕ್ಷಿಸುವಂತೆ ಮಾಡಿದೆ. 
 
ನೃತ್ಯ ಚೆನ್ನಾಗಿ ಬರಲು ಅವರು ಸಾಕಷ್ಟು ಕಸರತ್ತು ಮಾಡಿದ್ದಾರಂತೆ. ಇತ್ತೀಚೆಗಷ್ಟೇ ಈ ಹಾಡಿನ ಚಿತ್ರೀಕರಣ ಮುಗಿದಿದ್ದು ಗುಮರ್ ಡ್ಯಾನ್ಸ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಚಿತ್ರತಂಡ ತಿಳಿಸಿದೆ. ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ತಾರಾಬಳಗದ ಈ ಚಿತ್ರ ಮುಂದಿನ ನವೆಂಬರ್‌ಗೆ ತೆರೆಗೆ ಬರಲಿದೆ. ಈ ಚಿತ್ರಕ್ಕಾಗಿ ದೀಪಿಕಾ ಬರೋಬ್ಬರಿ ರೂ.12 ಕೋಟಿ ಪಡೆದಿದ್ದಾರೆ ಎಂಬ ಸುದ್ದಿ ಇದೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ನಮ್ಮಪ್ಪನ ತರ ಅಲ್ಲ: ಶ್ರುತಿ ಹಾಸನ್