'ಲವ್ ಆಜ್ ಕಲ್' ಚಿತ್ರದ ಮೂಲಕ ಅವಿಸ್ಮರಣೀಯ ಪಾತ್ರಗಳನ್ನು ಮಾಡಿದ್ದ ದೀಪಿಕಾ ಪಡುಕೋಣೆ.. ಈ ಚಿತ್ರದಲ್ಲಿ ಮೀರಾ ಪಾತ್ರಧಾರಿಯಲ್ಲಿ ಮಿಂಚಿದ್ದರು. ಇಂದಿಗೂ ದೀಪಿಕಾ ನಟಿಸಿದ್ದ ಈ ಚಿತ್ರವನ್ನು ಅಭಿಮಾನಿಗಳು ಮರೆತಿಲ್ಲ.. ವೈವಿಧ್ಯಮಯ ಪಾತ್ರಗಳ ಮೂಲಕ ಚಿತ್ರರಸಿಕರ ಮನಗೆದ್ದ ದೀಪಿಕಾ, ಅಭಿಮಾನಿಯೊಬ್ಬರ ಶುಭಾಷಯಕ್ಕೆ ದೀಪಿಕಾ ಏನ್ ಹೇಳಿದ್ರು ಗೊತ್ತಾ? ಈ ವರದಿ ನೋಡಿ.
ಮೀರಾ ಪಾತ್ರ ಮಾಡಿದ್ದ ದೀಪಿಕಾ ಈ ಚಿತ್ರವು ವೃತ್ತಿ ಆಧಾರಿತ ಹಾಗೂ ಮಹಿಳೆಯ ಧೈರ್ಯ ತೋರ್ಪಡಿಸುವ ಹಾಗೂ ಪ್ರತಿ ಹೆಣ್ಣಿನ ಮನಸ್ಸಿಗೆ ನಾಟುವಂತಹ ಚಿತ್ರವಾಗಿ ಬಿಂಬಿತವಾಗಿತ್ತು.
ಈ ಹಿನ್ನೆಲೆ ಲವ್ ಆಜ್ ಕಲ್ ಚಿತ್ರವು ಇಂದಿಗೆ ಏಳು ವರ್ಷ ಪೂರೈಸಿದೆ. ಈ ನಿಮಿತ್ಯ ಫಿಮೇಲ್ ಅಭಿಮಾನಿಯೊಬ್ಬರು ಲವ್ ಆಜ್ ಕಲ್ ಚಿತ್ರವು ಏಳು ವರ್ಷ ಪೂರೈಸಿದ್ದಕ್ಕಾಗಿ ದೀಪಿಕಾ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶುಭಾಷಯ ಕೋರಿದ್ದರು. ಮೇಹಕಾ ದತ್ತ ಎಂಬಾತ ಮಹಿಳಾ ಅಭಿಮಾನಿಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ದೀಪಿಕಾ ಅವರ ಮೀರಾ ಪಾತ್ರದ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದರು.
ಬಳಿಕ ಲವ್ ಆಜ್ ಕಲ್ ಚಿತ್ರ ನೆನಪಿಸಿದ ಮೆಹಕಾ ದತ್ತ ಎಂಬ ಅಭಿಮಾನಿಯನ್ನು ದೀಪಿಕಾ ಪಡುಕೋಣೆ ತಮ್ಮ ಉದಾರ ಮನಸ್ಸಿನಿಂದ 'ಥ್ಯಾಂಕೂ' ಅಂತ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ