Select Your Language

Notifications

webdunia
webdunia
webdunia
webdunia

ನಟಿ ದೀಪಿಕಾ ಪಡುಕೋಣೆ ಸಲ್ಮಾನ್ ಖಾನ್ ಅವರೊಂದಿಗೆ ಅಭಿನಯಿಸೋದಿಲ್ವಾ?

ನಟಿ ದೀಪಿಕಾ ಪಡುಕೋಣೆ ಸಲ್ಮಾನ್ ಖಾನ್ ಅವರೊಂದಿಗೆ ಅಭಿನಯಿಸೋದಿಲ್ವಾ?
ಮುಂಬೈ , ಮಂಗಳವಾರ, 3 ಮೇ 2016 (11:56 IST)
ಈಗಾಗಲೇ ಬಾಲಿವುಡ್ ನ ಅನೇಕ ಖ್ಯಾತ ನಟರೊಂದಿಗೆ ಅಭಿನಯಿಸಿರುವ ನಟಿ ದೀಪಿಕಾ ಪಡುಕೋಣೆ. ದೀಪಿಕಾ ಶಾರುಖ್ ಖಾನ್ ಅವರೊಂದಿಗೆ ಎರಡು ಬಾರಿ ಅಭಿನಯಿಸಿದ್ದಾರೆ. ಹಾಗೇ ಅಮಿತಾಬ್ ಬಚ್ಚನ್ ಅವರೊಂದಿಗೂ ಅಭಿನಯಿಸಿದ್ದಾರೆ.


ಹೀಗಿರುವಾಗಲೇ ಅವರು ಸಲ್ಮಾನ್ ಖಾನ್ ಅವರೊಂದಿಗೂ ಅಭಿನಯಿಸುತ್ತಾರೆ ಅನ್ನೋ ಮಾತುಗಳು ಬಾಲಿವುಡ್ ನಲ್ಲಿ ಬಹು ದಿನಗಳಿಂದ ಕೇಳಿ ಬರುತ್ತಲೇ ಇತ್ತು.ಆದ್ರೀಗ ಇದು ಸುಳ್ಳು ಅನ್ನಲಾಗುತ್ತಿದೆ.
 
ಕಬೀರ್ ಖಾನ್ ನಿರ್ದೇಶನ ಮಾಡುತ್ತಿರೋ ಮುಂದಿನ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರು ಸಲ್ಮಾನ್ ಖಾನ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ.ಅವರ ಹಾಲಿವುಡ್ ಸಿನಿಮಾದ ಶೂಟಿಂಗ್ ಮುಕ್ತಾಯವಾದ ಕೂಡಲೇ ಅವರು ಈ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಅಂತಾ ಹೇಳಲಾಗಿತ್ತು.
 
ಆದ್ರೆ ಈಗ ಈ ಸಿನಿಮಾದಲ್ಲಿ ದೀಪಿಕಾ ಅವರು ಅಭಿನಯಿಸೋದಿಲ್ಲವಂತೆ ಅಂತಾ ಹೇಳಲಾಗುತ್ತಿದೆ.ಸಿನಿಮಾದಲ್ಲಿ ಪಾತ್ರ ತನಗೆ ಇಷ್ಟವಾಗದೇ ಇರೋದರಿಂದ ಅವರು ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಒಲ್ಲೆ ಅಂದಿದ್ದಾರೆ ಅಂತಾ ಹೇಳಲಾಗುತ್ತಿದೆ.ಆದ್ರೆ ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದಕ್ಕೆ ಅವರೇ ಉತ್ತರಿಸಬೇಕು.
 
ಅಂದ್ಹಾಗೆ ಸಲ್ಮಾನ್ ಖಾನ್ ಅವರೊಂದಿಗೆ ಅಭಿನಯಿಸಬೇಕು ಅಂತಾ ಅನೇಕ ನಾಯಕಿಯರ ಮಹದಾಸೆ.ಆದ್ರೆ ದೀಪಿಕಾ ಮಾತ್ರ ತನಗೆ ಸಿಕ್ಕ ಅವಕಾಶವನ್ನು ಕೂಡ ಯಾವುದೋ ಒಂದು ಪುಟ್ಟ ಕಾರಣ ನೀಡಿ ನಿರಾಕರಿಸಿದ್ದಾರೆ. ಹಾಗಾಗಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಮುಂದೇನಾದ್ರು ಅವಕಾಶ ಸಿಕ್ರೆ ಅವರು ಅಭಿನಯಿಸುತ್ತಾರೋ ಕಾದು ನೋಡ್ಬೇಕು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನ ಮೇಣದ ಪ್ರತಿಮೆ ನೋಡುವಾಸೆಯಂತೆ ಶಿವಣ್ಣನಿಗೆ