Publish Date: Thu, 09 Jun 2016 (15:52 IST)
Updated Date: Thu, 09 Jun 2016 (15:58 IST)
ದೀಪಿಕಾ ಪಡುಕೋಣೆ ಎಂದಿಗೂ ಬ್ಯೂಸಿ ಇರುವ ನಟಿ ಆದ್ರೆ ಡಿಪ್ಪಿ ತನ್ನ ಪೋಷಕರನ್ನು ಭೇಟಿ ಮಾಡಲು ಬೆಂಗಳೂರಿಗೆ ಆಗಮಿಸಿದ್ದಾಳೆ.ಸಿಲಿಕಾನ್ ಸಿಟಿಯಲ್ಲಿ ದೀಪಿಕಾ ಪಡುಕೋಣೆ ಇದ್ದಾಳಂತೆ...
ಕೆಲ ಮೂಲಗಳ ಪ್ರಕಾರ ದೀಪಿಕಾ ಬೆಂಗಳೂರಿನಲ್ಲಿದ್ದಾಳಂತೆ... ಅವಳ ಮನೆ ಹತ್ತಿರ ಇರುವ ಐಸ್‌ಕ್ರಿಮ್ ಕಾರ್ನರ್‌ಗೆ ಹೋಗಿ ಅಲ್ಲಿ ಐಸ್‌ಕ್ರಿಮ್,ಮಸಾಲೆ ದೋಸೆ,ಹಾಗೂ ಚಾಕಲೇಟ್‌ಗಳನ್ನು ತಿನ್ನುತ್ತಿದ್ದಾಳಂತೆ.
ಇನ್ನೂ ಕೆಲ ಮೂಲಗಳ ಪ್ರಕಾರ ದೀಪಿಕಾ ಪಡುಕೋಣೆ ಟಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದು, ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಜತೆಗೆ ದೀಪಿಕಾ ನಟಿಸುವ ಬಗ್ಗೆ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.
ತೆಲುಗಿನ' ಕತ್ತಿಲಾಂಟೊಡು' ಚಿತ್ರದಲ್ಲಿ ಚಿರಂಜೀವಿ ಜತೆಗೆ ಡಿಪ್ಪಿ ಕಾಣಿಸಿಕೊಳ್ಳಲಿದ್ದಾಳಂತೆ. ಈ ಚಿತ್ರಕ್ಕೆ ನಾಯಕಿಗಾಗಿ ಹುಡುಕಾಟ ನಡೆಸಿದಾಗ ಆಗ ದೀಪಿಕಾರನ್ನು ಚಿತ್ರಕ್ಕೆ ತೆಗೆದುಕೊಳ್ಳವುದಕ್ಕಾಗಿ ದೀಪಿಕಾರನ್ನು ಭೇಟಿ ಮಾಡಲಾಗಿದೆಯಂತೆ. ಆದ್ರೆ ದೀಪಿಕಾ ಸದ್ಯ 'ರಬ್ತಾ' ಚಿತ್ರದ ಶೂಟಿಂಗ್‌ಲ್ಲಿ ಬ್ಯೂಸಿ ಇದ್ದಾಳೆ.
ಇನ್ನೂ ಕತ್ತಿಲಾಂಟೊಡು ಚಿತ್ರವು ಕತ್ತಿ ಇಳೆಯದಳಪತಿ ವಿಜಯ್ ನಟಿಸಿದ್ದ ಕತ್ತಿ ಚಿತ್ರದ ರಿಮೇಕ್ ಆಗಿದ್ದು..ಸದ್ಯಕ್ಕೆ ದೀಪಿಕಾ ನಿಜಕ್ಕೂ 'ಕತ್ತಿಲಾಂಟೊಡು' ಚಿತ್ರದಲ್ಲಿ ನಟಿಸ್ತಾರಾ ಎಂಬುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ