Select Your Language

Notifications

webdunia
webdunia
webdunia
webdunia

ಶೀಘ್ರದಲ್ಲೇ ಹಸೆಮಣೆ ಏರಲಿರುವ ನಟಿ ದೀಪಿಕಾ ಕಾಮಯ್ಯ

ಶೀಘ್ರದಲ್ಲೇ ಹಸೆಮಣೆ ಏರಲಿರುವ ನಟಿ ದೀಪಿಕಾ ಕಾಮಯ್ಯ
ಬೆಂಗಳೂರು , ಸೋಮವಾರ, 26 ಸೆಪ್ಟಂಬರ್ 2016 (19:13 IST)
ಚಾಲೆಂಜಿಂಗ್ ದರ್ಶನ್ ಜೊತೆ ಚಿಂಗಾರಿಯಲ್ಲಿ ಮಿಂಚಿ, ಬಿಗ್‍ಬಾಸ್‍ನಲ್ಲಿ ಸುದ್ದಿಯಗಿದ್ದ ನಟಿ ದೀಪಿಕಾ ಕಾಮಯ್ಯ ವೈವಾಹಿಕ ಜೀವನಕ್ಕೆ ಕಾಲಿಡೋಕೆ ಸಿದ್ಧರಾಗಿದ್ದಾರೆ.ಚಾಲೆಂಜಿಂಗ್ ದರ್ಶನ್ ಜತೆ ಚಿಂಗಾರಿಯಲ್ಲಿ ಅಭಿನಯಿಸಿದ್ದ ನಟಿ ದೀಪಿಕಾ ಕಾಮಯ್ಯ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಇದೇ ಡಿಸೆಂಬರ್ ನಲ್ಲಿ ಅವರು ಮದುವೆಗೆ ಸಿದ್ಧತೆ ನಡೆಯುತ್ತಿದೆ. 

 
ಮೈಸೂರಿನವರಾದ ದೀಪಿಕಾ, ಆಸ್ಟ್ರೇಲಿಯಾ ಉದ್ಯೋಗಿ ಸುಮಂತ್ ಗೋಪಿ ಜತೆ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಚಿಂಗಾರಿ ಚಿತ್ರದ ಮೂಲಕ ದರ್ಶನ್ ಜತೆಗೆ ನಟಿಸಿ ಎಂಟ್ರಿ ನೀಡಿದ್ದರು. ಇದಾದ ಬಳಿಕ ಆಟೋ ರಾಜ, ನೀನೆ ಬರಿ ನೀನೆ ಸಿನಿಮಾದಲ್ಲಿ ಮಂಡೆ ಬೂಡಡ್ಡಿ ಬೂಡ್ಡಿ ಎಂಬ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದರು.
 
ಅಂದಹಾಗೆ ದೀಪಿಕಾ ಮದುವೆಗೆ ಇನ್ನೂ ಡೇಟ್ ಫಿಕ್ಸ್ ಆಗಿಲ್ಲ. ಆದ್ರೆ ನವೆಂಬರ್ ಕೊನೆಯ ವಾರದಲ್ಲಿ ಅಥವಾ ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ದೀಪಿಕಾ ಬಿಗ್ ಬಾಸ್ ನಲ್ಲೂ ಮಿಂಚಿದ್ದರು. ಮದುವೆ ಬೆಂಗಳೂರಿನಲ್ಲೇ ಇರುತ್ತದೆ ಎಂದು ತಿಳಿದು ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



 
 

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನ ಜತೆಗೆ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದ ನಟ ಪ್ರಭುದೇವ್