Select Your Language

Notifications

webdunia
webdunia
webdunia
webdunia

ಬಾಹುಬಲಿ-2ಗೆ ಶಾಕ್ ನೀಡಿದ ದಂಗಾಲ್.. ಚೀನಾ ಕೊಟ್ಟ ಗಿಫ್ಟ್

ಬಾಹುಬಲಿ-2ಗೆ ಶಾಕ್ ನೀಡಿದ ದಂಗಾಲ್.. ಚೀನಾ ಕೊಟ್ಟ ಗಿಫ್ಟ್
ಮುಂಬೈ , ಶುಕ್ರವಾರ, 26 ಮೇ 2017 (17:26 IST)
ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಚಿತ್ರ ಬಾಹುಬಲಿ-2. ಏಪ್ರಿಲ್ 28ರಂದು ತೆರೆಕಂಡ ಈ ಚಿತ್ರಕ್ಕೆ ಅಭಿಮಾನಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತ್ತು. 1000 ಕೋಟಿ ರೂ. ಕ್ಲಬ್ ಸೇರಿದ ಮೊದಲ ಭಾರತೀಯ ಸಿನಿಮಾ ಎಂಬ ಖ್ಯಾತಿಗೂ ಬಾಹುಬಲಿ-2 ಪಾತ್ರವಾಗಿದೆ.1500 ಕೋಟಿಗೂ ಅಧಿಕ ಗಳಿಕೆ ಕಂಡು ಭಾರತೀಯ ಸಿನಿಮಾವೊಂದು ಗಳಿಸಿದ ಅತ್ಯಧಿಕ ಮೊತ್ತವಿದು ಎಂದು ಬೀಗುತ್ತಿದ್ದ ಬಾಹುಬಲಿ-2 ಚಿತ್ರತಂಡಕ್ಕೆ ದಂಗಾಲ್ ಶಾಕ್ ನೀಡಿದೆ.
  

ವರದಿಗಳ ಪ್ರಕಾರ, ಅಮೀರ್ ಖಾನ್ ಅಭಿನಯದ ದಂಗಾಲ್ ಚಿತ್ರ ಗಳಿಕೆಯಲ್ಲಿ ಬಾಹುಬಲಿ-2 ಚಿತ್ರದ ದಾಖಲೆಯನ್ನ ಮುರಿದಿದೆ. ವಿಶ್ವಾದ್ಯಂತ ಬಾಹುಬಲಿ-2 ಚಿತ್ರ 1530 ಕೋಟಿ ರೂ. ಗಳಿಕೆ ಕಂಡಿದ್ದಾರೆ. ದಂಗಾಲ್ 1743 ಕೋಟಿ ರೂ. ಗಳಿಕೆ ಕಂಡು ಮುನ್ನುಗ್ಗುತ್ತಿದೆ.

ಅಂದಹಾಗೆ, ದಂಗಾಲ್`ನ ಈ ಅಭೂತಪೂರ್ವ ದಾಖಲೆಗೆ ಕಾರಣ ಚೀನಾ ಬಾಕ್ಸ್ ಆಫೀಸ್. ಇತ್ತೀಚೆಗೆ ಚೀನಾದಲ್ಲಿ ತೆರೆಕಂಡ ದಂಗಾಲ್ ಚಿತ್ರ ಚೀನಾ ದೇಶವೊಂದರಲ್ಲೇ 810 ಕೋಟಿ ರೂ. ಗಳಿಕೆ ಕಂಡಿದೆ. ಈ ಮಧ್ಯೆ, ಬಾಹುಬಲಿ-2 ಸಹ ಚೀನಾದಲ್ಲಿ ತೆರೆಗೆ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದು, ದಂಗಾಲ್ ದಾಖಲೆಯನ್ನ ಮುರಿಯುತ್ತಾ..? ಕಾದುನೋಡಬೇಕಿದೆ.

ಈ ಮಧ್ಯೆ, ದಂಗಾಲ್ ಮತ್ತು ಬಾಹುಬಲಿ-2 ಎರಡೂ ಉತ್ತಮ ಸಿನಿಮಾಗಳೇ ಎರಡಕ್ಕೂ ತಾಳೆ ನೋಡಬೇಡಿ ಎಂದು ಅಮೀರ್ ಖಾನ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ತಾರೆ ರಾಗಿಣಿ-ಆದಿತ್ಯಾ ಮದುವೆಯಾದ್ರು!