Select Your Language

Notifications

webdunia
webdunia
webdunia
webdunia

ಪ್ರಜಾಪ್ರಭುತ್ವದಲ್ಲಿ ಕ್ರಿಯೆಟಿವಿಟಿಯನ್ನು ಎಂದಿಗೂ ನಿಲ್ಲಿಸಬಾರದು -ಪ್ರಿಯಾಂಕಾ

Priyanka Chopra
ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಅನುರಾಗ್ ಕಶ್ಯಪ್ ಅವರ ಉಡ್ತಾ ಪಂಜಾಬ್ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿರುವ ಪ್ರಿಯಾಂಕಾ ಪ್ರಜಾಪ್ರಭುತ್ವದಲ್ಲಿ ಕ್ರಿಯೆಟಿವಿಟಿ ಎಂದಿಗೂ ನಿಲ್ಲವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಉಡ್ತಾ ಪಂಜಾಬ್ ಚಿತ್ರದ ಟೈಟಲ್ ವಿವಾದಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, 

'ನಮ್ಮ ಪೂರ್ವಜರ ಸುದೀರ್ಘ ಹೋರಾಟದ ಬಳಿಕ ನಮಗೆ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಲಭಿಸಿದೆ'. 'ಕ್ರಿಯೆಟಿವಿಟಿಯನ್ನು ಪ್ರಜಾಪ್ರಭುತ್ವದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. 'ಜೈ ಗಂಗಾಜಲ' ಚಿತ್ರಕ್ಕೂ ಆಕ್ಷೇಪಣೆ ಕೇಳಿ ಬಂದಿದ್ದವು ಎಂದು ಪ್ರಿಯಾಂಕಾ ಹೇಳಿದ್ದಾಳೆ. 
 
ಇತ್ತೀಚೆಗೆ ಪ್ರಿಯಾಂಕಾ ಛೋಪ್ರಾಗೆ ಪದ್ಮಶ್ರೀ ಪ್ರಶಸ್ತಿ ದೊರಕಿತ್ತು. 'ಉಡ್ತಾ ಪಂಜಾಬ್' ಟೈಟಲ್ ತೆಗೆದುಹಾಕುವ ಕುರಿತು ಪ್ರತಿಕ್ರಿಯೆ ನೀಡಿದ ಪ್ರಿಯಾಂಕಾ..

'ಚಿತ್ರದ ಟೈಟಲ್ ಹಿಂದೆ ನಿರ್ಮಾಪಕರ ಹಾಗೂ ನಿರ್ದೇಶಕರ ಕ್ರಿಯೆಟಿವಿಟಿ ಅಡಗಿರುತ್ತದೆ 'ಹಾಗಾಗಿ ಅದನ್ನು ತೆಗೆದುಹಾಕಲು ಹೇಗೆ ಸಾಧ್ಯ? ಎಂದು ಪ್ರಿಯಾಂಕಾ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಲು ಗರ್ಲ್‌ಫ್ರೆಂಡ್ ಲೂಲಿಯಾಗಾಗಿ ಪಾರ್ಟಿ ಆಯೋಜಿಸಿರುವ ಅನುಷ್ಕಾ?