Select Your Language

Notifications

webdunia
webdunia
webdunia
webdunia

ಚೀನಾ ಅಧ್ಯಕ್ಷರು ಮೆಚ್ಚಿದ ದಂಗಲ್ !

ಚೀನಾ ಅಧ್ಯಕ್ಷರು ಮೆಚ್ಚಿದ ದಂಗಲ್ !
NewDelhi , ಶನಿವಾರ, 10 ಜೂನ್ 2017 (12:23 IST)
ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾ ಚೀನಾದಲ್ಲಿ ದಾಖಲೆ ಗಳಿಕೆ ಮಾಡಿತ್ತು. ಇದೀಗ ಆ ಚಿತ್ರವನ್ನು ಸ್ವತಃ ಅಲ್ಲಿನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮೆಚ್ಚಿದ್ದಾರೆ.

 
ಕಜಕಿಸ್ತಾನದಲ್ಲಿ ಸಹಕಾರ ಶೃಂಗದ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ದಂಗಲ್ ಚಿತ್ರದ ಬಗ್ಗೆ ಹೊಗಳಿ ಮಾತನಾಡಿದ್ದಾರೆಂದು ವರದಿಯಾಗಿದೆ.

ಚೀನಾ ಅಧ್ಯಕ್ಷರು ಚಿತ್ರ ವೀಕ್ಷಣೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆಂದು ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಹೇಳಿದ್ದಾರೆ. ಅಮೀರ್ ಖಾನ್ ಅಭಿನಯದ ಈ ಚಿತ್ರ ತನ್ನ ಹೆಣ್ಣುಮಕ್ಕಳನ್ನು ಕುಸ್ತಿ ಪಟುಗಳನ್ನಾಗಿ ಮಾಡುವ ತಂದೆಯ ಕತೆಯನ್ನು ಒಳಗೊಂಡಿದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ವತಮ್ಮ ರಾಜ್ ಕುಮಾರ್ ಗೆ ಸರ್ಕಾರಿ ಗೌರವ ಕೊಟ್ಟಿದ್ದಕ್ಕೆ ಪುತ್ರ ಶಿವರಾಜ್ ಹೇಳಿದ್ದೇನು?