Select Your Language

Notifications

webdunia
webdunia
webdunia
webdunia

ಇಂದು ರಿಲೀಸ್ ಆಗಲಿವೆ ಟ್ರಾಫಿಕ್,ಒನ್ ನೈಟ್ ಸ್ಟ್ಯಾಂಡ್,ಸಿವಿಲ್ ವಾರ್ ಚಿತ್ರಗಳು

today movie release
ಮುಂಬೈ , ಶುಕ್ರವಾರ, 6 ಮೇ 2016 (12:06 IST)
ಸಿನಿ ಶುಕ್ರವಾರಕ್ಕೆ ಅಭಿಮಾನಿಗಳು ತಮ್ಮ ಇಸ್ಟದ ನಟನ ಚಿತ್ರ ನೋಡಲು ಕಾತುರದಲ್ಲಿರುತ್ತಾರೆ.. ಇಂದು ಬಿಗ್ ಸ್ಕ್ರೀನ್ ಮೇಲೆ ಹಲವು ಚಿತ್ರಗಳು ಬರಲು ಸಜ್ಜಾಗಿವೆ.. ಇವತ್ತು ಯಾವೆಲ್ಲ ಚಿತ್ರಗಳು ರಿಲೀಸ್ ಆಗಲಿವೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ. 
ಬಾಲಿವುಡ್‌ನಲ್ಲಿ ತೆರೆಗೆ ಅಪ್ಪಳಿಸಲಿವೆ ಟ್ರಾಫಿಕ್, ಕ್ಯಾಪ್ಟೇನ್ ಅಮೇರಿಕಾ, ಸಿವಿಲ್ ವಾರ್ ಹಾಗೂ ಒನ್ ನೈಟ್ ಸ್ಟ್ಯಾಂಡ್ , 1920 ಲಂಡನ್ ಚಿತ್ರಗಳು..
 
ಒಂದೇ ದಿನಕ್ಕೆ ಬಾಲಿವುಡ್ 5 ಚಿತ್ರಗಳು ರಿಲೀಸ್ ಆಗ್ತಿರೋದ್ರಿಂದ ಹಲವು ಅಭಿಮಾನಿಗಳು ಕೂತುಹಲ ಮೂಡಿಸಿದೆ. ಆದರೆ ಯಾವುದು ಚಿತ್ರ ಅಭಿಮಾನಿಗಳಿಗೆ ಇಷ್ಟವಾಗಲಿದೆ ಎಂಬುದು ಕಾದು ನೋಡ್ಬೇಕು..
 
ಸನ್ನಿ ಲಿಯೋನ್‌ಳ ಮುಂಬರುವ ಚಿತ್ರ ಒನ್ ನೈಟ್ ಸ್ಯ್ಟಾಂಡ್ ಚಿತ್ರದಲ್ಲಿ ಸನ್ನಿ ನ್ಯಾಚುರಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೊಂದು ಬಾರಿ ಸಾಮಾಜಿಕ ಕಾರ್ಯಗಳಿಂದ ಸುದ್ದಿಯಾಗುನ ನಟಿ ಸನ್ನಿ ಲಿಯೋನ್ ತಮ್ಮ ಮುಂದಿನ ಚಿತ್ರದ ವಿಡಿಯೋ ಸಾಕಷ್ಟು ಸುದ್ದಿ ಮಾಡಿತ್ತು. 
 
ಒನ್ ನೈಟ್ ಸ್ಟ್ಯಾಂಡ್ ಸಿನಿಮಾ ಇಂದು ರಿಲೀಸ್ ಆಗಲಿದೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಸನ್ನಿ ಲಿಯೋನ್ ಹಾಗೂ ತನುಜ್ ವಿರಾನಿ ಕಾಣಿಸಿಕೊಳ್ಳಲಿದ್ದಾರೆ. ಸನ್ನಿ ಲಿಯೋನ್ ಅಭಿನಯದ ಈ ಚಿತ್ರದಲ್ಲಿ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಚಿತ್ರ ನೋಡಿದ್ರೆ ತಿಳಿಯುತ್ತದೆ ಅಂತೆ ಚಿತ್ರದ ಕಥೆ ಹೇಗಿದೆ ಎಂದು ಹೇಳಲಾಗಿದೆ. 
 
ಇನ್ನೂ ಮನೋಜ್ ಅಭಿನಯದ ಟ್ರಾಫಿಕ್ ಚಿತ್ರದಲ್ಲಿ ಮನೋಜ್ ಕಾಣಿಸಿಕೊಳ್ಳಲಿದ್ದಾರೆ. ಆದ್ದರಿಂದ ಟ್ರಾಫಿಕ್ ಪೊಲೀಸರ ಬಟ್ಟೆ ಧರಿಸಿ ಡ್ಯೂಟಿಯಲ್ಲಿ ಮಿಂಚುತ್ತಿರುವ ಮನೋಜ್ ಬಾಜ್ಪೇಯಿ ಅವರ ನ್ಯೂ ಲುಕ್ ಚಿತ್ರದಲ್ಲಿ ಕಾಣಬಹುದು.. 
 
ಅಂದಹಾಗೆ ಟ್ರಾಫಿಕ್ ಪೊಲೀಸರ ಕೆಲಸದ ಬಗ್ಗೆ ತನ್ನ ಪಾತ್ರದಲ್ಲಿ ಅಳವಡಿಸಿಕೊಂಡಿದ್ದಾರೆ ಮನೋಜ್ ಬಾಜ್ಪೇಯಿ. ಟ್ರಾಫಿಕ್ ಪೊಲೀಸರ ಸಂಭಾಷಣೆಯನ್ನು ನೋಡಿ ಕಲಿತಿದ್ದಾರಂತೆ. ಅಲ್ಲದೇ ಟ್ರಾಫಿಕ್ ಪೊಲೀಸ್‌ರ ವೇಷಧಾರಿಯಲ್ಲಿ ಸಾಕಷ್ಟು ಅನುಭವ ನೀಡಿದೆ ಎಂದು ಮನೋಜ್ ತಿಳಿಸಿದ್ದಾರೆ. 
 
ಅದಲ್ಲದೇ ಸಿವಿಲ್ ವಾರ್ , ಕ್ಯಾಪ್ಟೇನ್ ಅಮೇರಿಕಾ, 1920 ಲಂಡನ್ ಚಿತ್ರಗಳು ಕೂಡ ಇಂದು ಬಿಡುಗಡೆಯಾಗಲಿವೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ದೀಪಿಕಾ ಜಾಗಕ್ಕೆ ಬಂದ್ರಾ ಕತ್ರೀನಾ ಕೈಫ್