ನಟಿ ಸೋನಾಕ್ಷಿ ಸಿನ್ಹಾ ಸದ್ಯ ತಮ್ಮ ಬಹು ನಿರೀಕ್ಷಿತ ಸಿನಿಮಾ ಅಕಿರಾದಲ್ಲಿ ಬ್ಯುಸಿಯಾಗಿದ್ದಾರೆ ಅನ್ನೋದೇನೋ ನಿಜ.ಆದ್ರೆ ಇದರ ನಡುವೆಯೇ ಅವರು ತಮಗಾಗಿ ಕೊಂಚ ಬಿಡುವು ಮಾಡಿಕೊಂಡಿದ್ದಾರೆ. ಆದ್ರೆ ಬಿಡುವಿನ ವೇಳೆಯಲ್ಲಿ ಸೋನು ಏನ್ ಮಾಡ್ತಿದ್ದಾರೆ ಅಂದುಕೊಂಡ್ರಾ ಸೋನಾಕ್ಷಿ ತಮ್ಮ ಗೆಳೆಯನ ಜೊತೆ ಸುತ್ತಾಡುತ್ತಿದ್ದಾರಂತೆ.
ಬಾಲಿವುಡ್ ನ ಈ ಚೆಂದುಳ್ಳಿ ಚೆಲುವೆ ಸದ್ಯ ಪ್ರೀತಿಯಲ್ಲಿ ಬಿದ್ದಿದ್ದಾರಂತೆ.ಅಂದ್ಹಾಗೆ ಸೋನಾಕ್ಷಿ ಸಿನ್ಹಾ ಅವರ ದಿಲ್ ಕದ್ದಿರುವ ಚೆಲುವನ ಹೆಸರು ಬಂಟಿ. ಬಂಟಿ ಹಾಗೂ ಸೋನಾಕ್ಷಿ ಸಿನ್ಹಾ ಪರಸ್ಪರ ಪ್ರೀತಿಸುತ್ತಿದ್ದಾರೆ ಅಂತಾ ಹೇಳಲಾಗುತ್ತಿದೆ. ಅಲ್ಲದೇ ಅವರಿಬ್ಬರು ಜೊತೆಯಾಗಿ ಸುತ್ತಾಡುತ್ತಿದ್ದಾರಂತೆ.
ಇತ್ತೀಚೆಗೆ ಇವರಿಬ್ಬರು ಜೊತೆಯಾಗಿ ಸುತ್ತಾಡುತ್ತಿದ್ದಾಗ ಕೆಲವರ ಕಣ್ಣಿಗೂ ಬಿದ್ದಿದ್ದಾರಂತೆ.ಅಂದ್ಹಾಗೆ ಬಂಟಿ ನಟ ಸೋಹೈಲ್ ಖಾನ್ ಅವರ ಭಾಮೈದನಂತೆ.ಅಂದ್ಹಾಗೆ ಮೂಲಗಳ ಪ್ರಕಾರ ಸೋನಾಕ್ಷಿ ಸಿನ್ಹಾ ಹಾಗೂ ಬಂಟಿ ಅವರಿಗೆ 2012 ರಿಂದಲೇ ಪರಿಚಯವಂತೆ.
ಇನ್ನು ಸೋನಾಕ್ಷಿ ಸಿನ್ಹಾ ಹಾಗೂ ಬಂಟಿ ಈ ಹಿಂದೆಯೂ ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಸೋನಾಕ್ಷಿ ಸಿನ್ಹಾ ಅವರ ಬರ್ತಡೇ ಪಾರ್ಟಿಯಲ್ಲೂ ಬಂಟಿ ಕಾಣಿಸಿಕೊಂಡಿದ್ದರು.ಈ ಹಿಂದೆ ಬಂಟಿ ನಟಿ ಸುಶ್ಮಿತಾ ಸೇನ್ ಅವರ ಹಿಂದೆ ಬಿದ್ದಿದ್ದರು ಅಂತಾ ಹೇಳಲಾಗುತ್ತಿದೆ. ಆದ್ರೆ ಇಷ್ಟೆಲ್ಲಾ ಸುದ್ದಿಯಾಗುತ್ತಿದ್ದರು ನಟಿ ಸೋನಾಕ್ಷಿ ಸಿನ್ಹಾ ಮಾತ್ರ ಇದ್ಯಾವುದಕ್ಕೂ ತುಟಿ ಪಿಟಿಕ್ ಅನ್ನುತ್ತಿಲ್ಲ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ