ಮುಂಬೈ: ದೀರ್ಘಕಾಲದ ಅಸೌಖ್ಯದಿಂದಾಗಿ ನಿನ್ನೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ ಬಾಲಿವುಡ್ ತಾರೆ ಐಶ್ವರ್ಯಾ ರೈ ತಂದೆ ಕೃಷ್ಣರಾಜ್ ರೈ ಅಂತ್ಯ ಸಂಸ್ಕಾರಕ್ಕೆ ಬಾಲಿವುಡ್ ಗಣ್ಯರ ದಂಡೇ ನೆರೆದಿತ್ತು.
ನಿನ್ನೆ ರಾತ್ರಿ ಮುಂಬೈನ ರುದ್ರ ಭೂಮಿಯೊಂದರಲ್ಲಿ ಅಂತ್ಯ ಸಂಸ್ಕಾರ ನೆರವೇರಿತ್ತು. ಈ ವೇಳೆ ಅಳಿಯ ಅಭಿಷೇಕ್ ಬಚ್ಚನ್ ಕುಟುಂಬ ಸಮೇತರಾಗಿ ಆಗಮಿಸಿದ್ದರು. ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡಾ ಪಾಲ್ಗೊಂಡಿದ್ದರು.
ಇವರಲ್ಲದೆ, ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್,ಕುನಾಲ್ ಕಪೂರ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಆಶುತೋಷ್ ಗೌರೀಕರ್ ಮುಂತಾದವರು ಪಾಲ್ಗೊಂಡು ಐಶ್ವರ್ಯಾ ಕುಟುಂಬಕ್ಕೆ ಸಾಂತ್ವನ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ